- +91 73497 60202
- [email protected]
- November 22, 2024 1:02 AM
ವಿಜಯದಶಮಿಯಂದು ಬಾಲಕಿಯರಿಗೆ ಖಡ್ಗ ವಿತರಿಸಿದ ಬಿಜೆಪಿ ಶಾಸಕ..! ಏನಿದು ವಿವಾದ..?
ನ್ಯೂಸ್ ನಾಟೌಟ್: ವಿಜಯದಶಮಿ ಸಂದರ್ಭದಲ್ಲಿ ಬಿಜೆಪಿ ಶಾಸಕ ಮಿತಿಲೇಶ್ ಕುಮಾರ್ ಬಾಲಕಿಯರಿಗೆ ಖಡ್ಗಗಳನ್ನು ವಿತರಿಸಿದ್ದು, ಈ ವಿವಾದಾತ್ಮಕ ಘಟನೆ ಬಿಹಾರದ ಸೀತಾಮರಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. “ಯಾವುದೇ ದುಷ್ಟ ಶಕ್ತಿಗಳು ನಮ್ಮ ಸಹೋದರಿಯರನ್ನು ಸ್ಪರ್ಶಿಸುವ ಸಾಹಸ ಮಾಡಿದರೆ, ಈ ಖಡ್ಗದ ಮೂಲಕ ಅವರ ಕೈಗಳನ್ನು ಕತ್ತರಿಸಿ” ಎಂದು ಸೀತಾಮರಿ ನಗರದ ಕಪ್ರೋಲ್ ರಸ್ತೆಯ ಪೂಜಾ ಪೆಂಡಾಲ್‍ನಲ್ಲಿ ನೀಡಿದ ವಿಜಯದಶಮಿ ಸಂದೇಶದಲ್ಲಿ ಕರೆ ನೀಡಿದ್ದಾರೆ. “ಅಗತ್ಯಬಿದ್ದರೆ ನಮ್ಮ ಸಹೋದರಿಯರು ಅವರ ಕೈಗಳನ್ನು ಕತ್ತರಿಸುವ ಸಾಮಥ್ರ್ಯ ಗಳಿಸಿಕೊಳ್ಳುವಂತೆ ಮಾಡಬೇಕು. ನಾನು ಮತ್ತು ನೀವೆಲ್ಲರೂ ಇದನ್ನು ಮಾಡಬೇಕು. ನಮ್ಮ ಸಹೋದರಿಯರ ವಿರುದ್ಧ ಕೆಟ್ಟ ಉದ್ದೇಶವನ್ನು ಹೊಂದಿದ ಈ ಎಲ್ಲ ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿನಿಯರಿಗೆ ಖಡ್ಗ ವಿತರಿಸಲಾಯಿತು. ಹಲವು ಆಯುಧಗಳು, ಖಡ್ಗ ಮತ್ತು ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಅವುಗಳಿಗೆ ಮಿಥಿಲೇಶ್ ಕುಮಾರ್ ಪೂಜೆ ಸಲ್ಲಿಸಿದರು. ಇವರು ಸೀತಾಮರಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದು, ಹಲವು ಕಡೆಗಳಲ್ಲಿ ಪೆಂಡಾಲ್‍ಗಳಿಗೆ ಭೇಟಿ ನೀಡಿ ಖಡ್ಗಗಳನ್ನು ವಿತರಿಸಿದ್ದಾರೆ ಎಂದು ವರದಿ ತಿಳಿಸಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ