- +91 73497 60202
- [email protected]
- November 21, 2024 9:51 PM
ನ್ಯೂಸ್ ನಾಟೌಟ್: ಮಗನ ಹುಟ್ಟು ಹಬ್ಬಕ್ಕಾಗಿ ಕಡವೆಯನ್ನು ಗುಂಡಿಕ್ಕಿ ಕೊಂದ ಮಾಂಸವನ್ನು ಮನೆಯ ಫ್ರೀಝರ್ ನಲ್ಲಿ ದಾಸ್ತಾನು ಇರಿಸಲಾದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಉಪ್ಪಿನಂಗಡಿ ಸಮೀಪದ ಗುಂಡ್ಯದಿಂದ ವಶಪಡಿಸಿಕೊಳ್ಳಲಾಗಿದೆ. ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿನ ನಿವಾಸಿ ಸುರೇಶ್ ಮತ್ತವರ ಸಹವರ್ತಿ ಜೊತೆಗೂಡಿ ಸರ್ಕಾರಿ ಅಭಯಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಮಗನ ಹುಟ್ಟು ಹಬ್ಬದ ಔತಣಕೂಟಕ್ಕೆಂದು ಕಡವೆ ಮಾಂಸವನ್ನು ಮನೆಯ ಫ್ರೀಝರ್ ನಲ್ಲಿರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬ್ಬಂದಿ ಸುರೇಶ್ ಮನೆಗೆ ದಾಳಿ ನಡೆಸಿ ಸಂಗ್ರಹಿಸಿಟ್ಟ ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟುವ ಮೂಲಕ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ