ನ್ಯೂಸ್ ನಾಟೌಟ್: ವಿಭಿನ್ನ ಮಾದರಿಯ ಅತ್ಯಾಕರ್ಷಕ ಪುರುಷರ ಹಾಗೂ ಮಹಿಳೆಯರ ಎಲ್ಲಾ ಬ್ರ್ಯಾಂಡೆಡ್ ಕಂಪನಿಗಳ ವಸ್ತ್ರಗಳ ನೂತನ ವಸ್ತ್ರ ಮಳಿಗೆ ರೊಮ್ಯಾಂಟಿಕ್ ಸೆ.11ರಂದು ಸುಳ್ಯದ ರಥಬೀದಿಯಲ್ಲಿ ನಂದಿನಿ ಟವರ್ಸ್ನಲ್ಲಿ ಶುಭಾರಂಭಗೊಂಡಿತು.
ನಂದಿನಿ ಟವರ್ಸ್ ಮಾಲೀಕ, ಹಿರಿಯರಾದ ಗುಡ್ಡಪ್ಪ ರೈ ಮೇನಾಲ ನೂತನ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ದೀಪ ಪ್ರಜ್ವಲನೆಗೊಳಿಸಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನ.ಪಂ. ಮಾಜಿ ಅಧ್ಯಕ್ಷ ಎನ್.ಎ. ರಾಮಚಂದ್ರ, ಹಿರಿಯ ಉದ್ಯಮಿಗಳಾದ ಕೃಷ್ಣ ಕಾಮತ್, ಕುಂ..ಕುಂ.. ಫ್ಯಾಶನ್ ಸಂಸ್ಥೆ ಕಾರ್ಯಾಚರಿಸುತ್ತಿರುವ ಕಟ್ಟಡದ ಮಾಲೀಕರಾದ ಪ್ರೇಮಲತಾ, ಕಟ್ಟೆಕಾರ್ ಅಬ್ದುಲ್ಲ, ಸುಳ್ಯ ನ.ಪಂ. ಸದಸ್ಯ ರಾಜು ಪಂಡಿತ್, ಅಮರಸುಳ್ಯ ರಮಣೀಯ ಸುಳ್ಯ ತಂಡದ ಪ್ರಭಾಕರ್ ನಾಯರ್,ಉದ್ಯಮಿ ಶಾಫಿ ಕುತ್ತಮೊಟ್ಟೆ ಮುಖ್ಯ ಅತಿಥಿಗಳಾಗಿದ್ದರು. ಈ ವೇಳೆ ರೊಮ್ಯಾಂಟಿಕ್ ವಸ್ತ್ರ ಮಳಿಗೆಯ ಮಾಲೀಕರಾದ ಭೀಮ್ ರಾಮ್ ಹಾಗೂ ಧನ್ ರಾಮ್ ರನ್ನು ಅಕ್ಷಯ್ ಕೆ.ಸಿ. ಗೌರವಿಸಿ ಶುಭ ಹಾರೈಸಿದರು.
ಶುಭಾರಂಭ ದಸರಾ ಹಾಗೂ ದೀಪಾವಳಿಯ ಪ್ರಯುಕ್ತ ರೂ. 1500, 5000 ಹಾಗೂ ರೂ. 10000 ಮೇಲ್ಪಟ್ಟ ಮೌಲ್ಯದ ಬಟ್ಟೆ ಖರೀದಿಗೆ ಅತ್ಯಾಕರ್ಷಕ ಬೆಳ್ಳಿಯ ಉಚಿತ ಉಡುಗೊರೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ನೂತನ ಮಳಿಗೆಯಲ್ಲಿ ಎಲ್ಲಾ ಬ್ರ್ಯಾಂಡೆಡ್ ಕಂಪನಿಗಳ ವಸ್ತ್ರಗಳು, ಪುರುಷರ, ಮಹಿಳೆಯರ ಹಾಗೂ ಮಕ್ಕಳ ಅತ್ಯಾಕರ್ಷಕ ಉಡುಪುಗಳು ದೊರೆಯಲಿದೆ. ಉತ್ತಮ ಗುಣಮಟ್ಟದ ಇನ್ನರ್ ವೇರ್, ಹೋಮ್ ವೇರ್, ಹ್ಯಾಂಡ್ ಲೂಮ್, ನ್ಯೂ ಬಾರ್ನ್ ವೇರ್, ಕುರ್ತೀಸ್, ವೆಸ್ಟರ್ನ್ ವೇರ್ ಮಿತದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.