ನ್ಯೂಸ್ ನಾಟೌಟ್: ಸುಳ್ಯ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ದಸರಾ ಕಾರ್ಯಕ್ರಮಕ್ಕೆ ಎಲ್ಲ ತಯಾರಿ ನಡೆದಿದೆ. ಈಗಾಗಲೇ ಶಾರದಾಂಬೆಯ ಪ್ರತಿಷ್ಠಾಪನೆಯನ್ನು ಬುಧವಾರ (ಅ.9) ನಡೆಸಲಾಗಿದೆ. ದಿನದ ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ ಚಿದಾನಂದ ಅವರು 9 ದಿನಗಳ ಕಾರ್ಯಕ್ರಮಕ್ಕೆ ಸಂಜೆ 6.30ಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 10-10-2024 ಗುರುವಾರ ಮಧ್ಯಾಹ್ನ ಗಂಟೆ 1-00 ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ ಗಂಟೆ 7:00 ರಿಂದ ನಾಟ್ಯ ನಿಲಯಂ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಹಾಗೂ ಶಿಷ್ಯ ವೃಂದದವರಿಂದ ನೃತ್ಯ ಸಂಕಲ್ಪ ನಡೆಯಲಿದೆ. ಬಳಿಕ ಮಹಾಪೂಜೆ ,ನಂತರ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 11-10-2024 ಶುಕ್ರವಾರ ಬೆಳಗ್ಗೆ ಗಂಟೆ 9-00 ರಿಂದ ತಾಲೂಕಿನ ಆಯ್ಕೆ ಭಜನಾ ತಂಡಗಳಿಂದ ಮಧ್ಯಾಹ್ನದ ತನಕ ಭಜನಾ ಸಂಕೀರ್ತನ ಮತ್ತು ಮಧ್ಯಾಹ್ನದ ನಂತರ ಕುಣಿತ ಭಜನೆಯೊಂದಿಗೆ “ಭಜನೋತ್ಸವ” ನಡೆಯಲಿದೆ. ಮಧ್ಯಾಹ್ನದ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 7:00 ರಿಂದ ಜಿಲ್ಲೆಯ ಹೆಸರಾಂತ ನೃತ್ಯ ತಂಡಗಳಾದ ಮಂಜು ಬ್ರದರ್ಸ್ ಸುಳ್ಯ ,ರಂಗ ಮಯೂರಿ ಕಲಾ ಶಾಲೆ ಸುಳ್ಯ ,ಪ್ಯೂಶನ್ ಇನ್ಸಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ,ಎಕ್ಸ್ಟಸಿ ಡ್ಯಾನ್ಸ್ ಕ್ರಿನ್ ಸುಳ್ಯ, ಡಿ ಯುನೈಟೆಡ್ ಡ್ಯಾನ್ಸ್ ಸ್ಟುಡಿಯೋ ಸುಳ್ಯ ಇವರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 12-10-2024 ಶನಿವಾರ ಬೆಳಿಗ್ಗೆ ಗಂಟೆ 6:30 ರಿಂದ ಆಯುಧ ಪೂಜೆ, ಬೆಳಗ್ಗೆ ಗಂಟೆ 9-00 ರಿಂದ ತಾಲೂಕಿನ ಮಹಿಳೆಯರಿಂದ ಮನೆಯಲ್ಲಿ ತಯಾರಿಸಿದ ವಿವಿಧ ಖಾದ್ಯಗಳು, ಗೃಹ ತಯಾರಿಕಾ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಮಹಿಳೆಯರ ವಿವಿಧ ಸ್ಪರ್ಧಾ ಕಾರ್ಯಕ್ರಮದೊಂದಿಗೆ ಮಹಿಳಾ ದಸರಾ -2024 ನಡೆಯಲಿದೆ. ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 7:30 ರಿಂದ ಆದಿ ಕಲ್ಚರಲ್ ಅಕಾಡೆಮಿ ಮೂಡಬಿದಿರೆಯ ವಿದುಷಿ ಸುಮನ ಪ್ರಸಾದ್ ಮತ್ತು ನೃತ್ಯ ಗುರು ಅಂಕಿತಾ ಪ್ರಜ್ವಲ್ ಎನ್.ಆರ್.ಪುರ.ಇವರಿಂದ ಅಷ್ಟಲಕ್ಷ್ಮೀ ಭರತನಾಟ್ಯ ನೃತ್ಯ ವೈಭವ ನಡೆಯಲಿದೆ. ಬಳಿಕ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ -ಕಾಟಿಪಳ್ಳ ಮಂಗಳೂರು ಇವರಿಂದ ‘ ಕಿತ್ತೂರು ರಾಣಿ ಚೆನ್ನಮ್ಮ ‘ ರಾಜ್ಯ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ ಯವರ ನಿರ್ದೇಶನದ ಶ್ರೀ ದೇವಿ ಮಹಿಷಮರ್ದಿನಿ ಮಹಿಳಾ ಯಕ್ಷಗಾನ ನಡೆಯಲಿದೆ. ರಾತ್ರಿ ಗಂಟೆ 9-00 ಕ್ಕೆ ಶ್ರೀ ದೇವಿಯ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 13-10-2024 ಆದಿತ್ಯವಾರ ಬೆಳಗ್ಗೆ ಗಂಟೆ 6:22 ರಿಂದ ಪುಟಾಣಿಗಳಿಗೆ ಅಕ್ಷರಾಭ್ಯಾಸ ನಡೆಯಲಿದ್ದು, ಬೆಳಗ್ಗೆ ಗಂಟೆ 9-00 ರಿಂದ ಸುಳ್ಯ ಬಸ್ ನಿಲ್ದಾಣದಿಂದ ಅರಂಭಿಸಿ ಶಾರದಾಂಬ ವೇದಿಕೆ ತನಕ ಸುಳ್ಯ ತಾಲೂಕಿನ ವಿವಿಧ ಭಾಗದ ಮಕ್ಕಳಿಂದ ಅದ್ದೂರಿ ಮೆರವಣಿಗೆ ಸಾಗಿ ಬಂದು ಸಾಂಸ್ಕೃತಿಕ ವೈಭವದ ಮಕ್ಕಳ ದಸರಾ -2024 ನಡೆಯಲಿದೆ. ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 7:30 ರಿಂದ ಇಂಡಿಯನ್ ಹಿಪೋಪ್ ಸಿಲ್ವರ್ ಮೆಡಲಿಸ್ಟ್, ರಾಜ್ಯ ಪ್ರಶಸ್ತಿ ವಿಜೇತ ಟೀಮ್ ಡಿ -ಝಾಕ್ ಉಡುಪಿ ಇವರಿಂದ ಡ್ಯಾನ್ಸ್ ನಡೆಯಲಿದೆ. ರಾತ್ರಿ ಗಂಟೆ 9-00 ಕ್ಕೆ ಶ್ರೀ ದೇವಿಯ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 14-10-2024 ಸೋಮವಾರ ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ. ಸಂಜೆ ಗಂಟೆ 7:00 ರಿಂದ ‘ಶಿವದೂತೆ ಗುಳಿಗೆ’ ಖ್ಯಾತಿಯ ಕಲಾ ಸಂಗಮದ ಕಲಾವಿದರಿಂದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಮಣಿಕಂಠ’ ಎಂಬ ಭಕ್ತಿ ಪ್ರಧಾನ ಕನ್ನಡ ನಾಟಕ ನಡೆಯಲಿದೆ. ರಾತ್ರಿ ಗಂಟೆ 9-00 ಕ್ಕೆ ಶ್ರೀ ದೇವಿಯ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 15-10-2024 ಮಂಗಳವಾರ ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ .ಸಂಜೆ ಗಂಟೆ 6:00 ರಿಂದ ಸಾಮೂಹಿಕ ಪ್ರಾರ್ಥನೆ ,ದೀಪಾರಾಧನೆ ,ಸ್ವಸ್ತಿ ಪುಣ್ಯಾಹ ,ಅಗ್ನಿಪ್ರತಿಷ್ಠೆ ,ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಹಾಗೂ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ (ರಿ) ಸುಳ್ಯ ಇವರ ಸಹಕಾರದೊಂದಿಗೆ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಲಿದೆ. ರಾತ್ರಿ ಗಂಟೆ 9-00 ಕ್ಕೆ ಶ್ರೀ ದೇವಿಯ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 16-10-2024 ಬುಧವಾರ ಮಧ್ಯಾಹ್ನ ಶ್ರೀ ದೇವಿಯ ಮಹಾಪೂಜೆ ನಡೆಯಲಿದೆ. ಸಂಜೆ ಗಂಟೆ 6:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ,ಬಳಿಕ ಚಲನಚಿತ್ರ ಹಿನ್ನಲೆ ಗಾಯಕ ಸರಿಗಮಪ ಸೀಸನ್ 20 ವಿಜೇತ ದರ್ಶನ್ ನಾರಾಯಣ್ ನೇತೃತ್ವದಲ್ಲಿ ಸ್ಟಾರ್ ಸಿಂಗರ್ಸ್ ಜಸ್ಕರಣ್ ಸಿಂಗ್ ,ಅಮಿಶ್ ಕುಮಾರ್ ,ಶಿವಾನಿ ನವೀನ್ ,ಐಶ್ವರ್ಯ ರಂಗರಾಜನ್ ಮತ್ತು ಅರ್ಫಾಜ್ ಉಲ್ಲಾಳ್ ಮೊದಲಾದ ಜನಪ್ರಿಯ ಗಾಯಕರೊಂದಿಗೆ ಅದ್ಧೂರಿ ಸಂಗೀತ ಸೌರಭ ನಡೆಯಲಿದೆ. ರಾತ್ರಿ ಗಂಟೆ 10:00 ಕ್ಕೆ ಶ್ರೀ ದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ವೈಭವದ ಮಹಾಪೂಜೆ ನಡೆಯಲಿದೆ.
ದಿನಾಂಕ 17-10-2024 ಗುರುವಾರ ಮಧ್ಯಾಹ್ನ 12:00 ಕ್ಕೆ ಮಹಾಪೂಜೆ ನಡೆಯಲಿದೆ. ಸಂಜೆ ಗಂಟೆ 3:00 ರಿಂದ ಶ್ರೀ ಶಾರದಾ ದೇವಿಯ ವಿಜೃಂಭಣೆಯ ಶೋಭಾಯಾತ್ರೆ ಹಾಗೂ ವಿಶೇಷ ಅಲಂಕಾರದೊಂದಿಗೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಶ್ರೀ ದೇವಿಯ ಶೋಭಾಯಾತ್ರೆಯು ಸುಳ್ಯ ಮುಖ್ಯ ರಸ್ತೆಯಲ್ಲಿ ಸಾಗಿ ಪಯಸ್ವಿನಿ ನದಿಯಲ್ಲಿ ಜಲಸ್ತಂಭನಗೊಳ್ಳಲಿದೆ.