ನ್ಯೂಸ್ ನಾಟೌಟ್ : ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 9ನೇ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಆಯುರ್ವೇದ ಸಪ್ತಾಹ ಕಾರ್ಯಕ್ರಮದಮಾಹಿತಿ ಕಾರ್ಯಾಗಾರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಬುಧವಾರ ( ಅ. 23 ) ಸುಳ್ಯದ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗಾಯತ್ರಿ ಜಿ ನಾಯಕ್, ಡಾ. ವಿಜಯಲಕ್ಷ್ಮಿ ಪಿ. ಬಿ., ಮದುಮತಿ ಬೊಳ್ಳೂರು, ಅನಿತಾ ಸುತ್ತುಕೋಟೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮಹಿಳಾ ಮಂಡಳಿಯ ಒಕ್ಕೂಟದ ಅಧ್ಯಕ್ಷ ಮದುಮತಿ ಬೊಳ್ಳೂರು ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ 22ರಿಂದ 45 ವಯಸ್ಸಿನ ಮಹಿಳೆಯರ ಯೋಗಕ್ಷೇಮದಲ್ಲಿ ಆಯುರ್ವೇದ ಪಾತ್ರ” ಎಂಬ ವಿಷಯದ ಬಗ್ಗೆ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಭಾಗದ ಪ್ರೊಫೆಸರ್ ಡಾ.ವಿಜಯಲಕ್ಷ್ಮಿ ಪಿ. ಬಿ. ಕಾರ್ಯಾಗಾರ ನಡೆಸಿಕೊಟ್ಟರು. ಮಹಿಳಾ ಸಮಾಜದ ಪದಾಧಿಕಾರಿಗಳು, ಮಹಿಳಾ ಮಂಡಳಿಗಳ ಸದಸ್ಯರು ಪಾಲ್ಗೊಂಡಿದ್ದರು.
ಮಹಿಳಾ ಮಂಡಳಿಯ ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್ ಸ್ವಾಗತಿಸಿ, ಮಹಿಳಾ ಮಂಡಳಿಯ ಒಕ್ಕೂಟದ ಕಾರ್ಯದರ್ಶಿ ಅನಿತಾ ಸುತ್ತುಕೋಟೆ ವಂದಿಸಿ, ಶ್ರೀನಿಧಿ ಮಹಿಳಾ ಮಂಡಳಿ ಕಾಯರ್ತೋಡಿಯ ಹೇಮಾ ವೇಣುಗೋಪಾಲ ಕಾರ್ಯಕ್ರಮ ನಿರೂಪಿಸಿದರು. ಜೂನಿಯರ್ ಕಾಲೇಜಿನ ಪ್ರಶಿಕ್ಷಣಾರ್ತಿ ಶ್ರಾವ್ಯ ಪ್ರಾರ್ಥಿಸಿದರು. ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಸ್ಮಿತಾ ಪಿ. ಕೆ., ಡಾ. ಅವಿನಾಶ್ ಎಸ್., ಡಾ. ಶ್ರೇಯಾ ಪಿ., ಡಾ. ನಿತೀಶ್ ಕೆ. ಸಹಕರಿಸಿದರು.