ನ್ಯೂಸ್ ನಾಟೌಟ್: ಪಾಪಿ ಕಲಿಯುಗದಲ್ಲಿ ದಿನದಿಂದ ದಿನಕ್ಕೆ ಕ್ರೈಂ ರೇಟ್ ಏರುತ್ತಲೇ ಇದೆ. ಮಾನವೀಯತೆ ಮನುಷ್ಯತ್ವವೇ ಸತ್ತು ಹೋಗುತ್ತಿರುವ ಇಂದಿನ ದಿನಗಳಲ್ಲಿ ಮನುಷ್ಯ ಬದುಕುವುದೇ ಒಂದು ದೊಡ್ಡ ಸಾಹಸವಾಗಿದೆ. ಅತ್ತಿಗೆ ತಾಯಿಗೆ ಸಮಾನ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ದೂರ್ತ ಅತ್ತಿಗೆಯನ್ನು ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದಾನೆ.
ಜಯಭಾರತಿ (56 ವರ್ಷ) ಸಾವನ್ನಪ್ಪಿದ ಮಹಿಳೆ. ಮಲಗಿದ್ದ ಜಯಭಾರತಿ ಅವರ ಮೇಲೆ ಅವರ ಪತಿಯ ತಮ್ಮ ಶಂಕರ್ ನಾಯಕ್ ಎನ್ನುವ ವ್ಯಕ್ತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಹಿಳೆ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜಯ ಭಾರತಿ ಅವರ ಪತಿ ಜನಾರ್ದನ್ ನಾಯಕ್ ವರ್ಷಗಳ ಹಿಂದೆಯಷ್ಟೇ ನಿಧನರಾಗಿದ್ದರು. ಜಯ ಭಾರತಿ ಮಗ ಇತ್ತೀಚೆಗೆ ವಿದೇಶಕ್ಕೆ ಹೋಗಿದ್ದರು. ಮನೆಯಲ್ಲಿ ಪ್ಯಾರಲಿಸಿಸ್ ಅಟ್ಯಾಕ್ ಆಗಿ ಚಿಕಿತ್ಸೆಯಲ್ಲಿದ್ದ ಶಂಕರ್ ನಾಯಕ್ ಮತ್ತು ಜಯ ಭಾರತಿ ಇಬ್ಬರೇ ಇದ್ದರು, ಶಂಕರ್ ನಾಯಕ್ ಗೆ ಊಟ, ತಿಂಡಿ ಎಲ್ಲದರ ವ್ಯವಸ್ಥೆಯನ್ನು ಜಯ ಭಾರತಿ ಅವರೇ ಮಾಡಿದ್ದರು ಕೂಡ ಜಯ ಭಾರತಿಯನ್ನು ಶಂಕರ್ ನಾಯಕ್ ವಿಪರೀತ ದ್ವೇಷಿಸುತ್ತಿದ್ದ ಈ ಹಿನ್ನೆಲೆಯಲ್ಲಿ ಕೊಲೆ ಆಗಿರಬಹುದು ಎಂದು ಶಂಕಿಸಲಾಗಿದೆ.