ನ್ಯೂಸ್ ನಾಟೌಟ್: ಮಗ ಮೃತಪಟ್ಟ ವಿಚಾರ ಕೇಳಿ ತಂದೆಯೂ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ಹಾವೇರಿಯ ಬಸವೇಶ್ವರ ನಗರದಲ್ಲಿ ಮಂಗಳವಾರ(ಅ.22) ರಂದು ಸಂಭವಿಸಿದೆ.
ತಂದೆ ಡಾ.ವೀರಭದ್ರಪ್ಪ ಗುಂಡಗಾವಿ, ಮಗ ಡಾ.ವಿನಯ ಗುಂಡಗಾವಿ ಮೃತ ದುರ್ದೈವಿಗಳು ಎಂದು ಗುರುತಿಸಲಾಗುದೆ.
ವೃತ್ತಿಯಲ್ಲಿ ತಂದೆ, ಮಗ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಆಕಸ್ಮಿಕವಾಗಿ ವಿನಯ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಈ ವಿಚಾರ ಕೇಳಿ ತಂದೆ ವೀರಭದ್ರಪ್ಪ ಅವರೂ ಕೂಡ ಹೃದಯಾಘಾತಕ್ಕೆ ಒಳಗಾಗಿ ಒಂದೇ ದಿನ ತಂದೆ ಮಗ ಮೃತಪಟ್ಟಿದ್ದಾರೆ.
Click