ನ್ಯೂಸ್ ನಾಟೌಟ್: ಇನ್ಸ್ಟಾಗ್ರಾಂ, ಫೇಸ್ಬುಕ್ ಮತ್ತು ವಾಟ್ಸಪ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಿದ ಘಟನೆ ಆಗ್ರಾದಲ್ಲಿ ನಡೆದಿದೆ.
ಬಂಧಿತರಲ್ಲಿ ಇಬ್ಬರು ಖರೀದಿದಾರರೂ ಸೇರಿದ್ದಾರೆ.
ಮುಝಫರ್ ನಗರದ ವ್ಯಕ್ತಿಯೊಬ್ಬರಿಗೆ ರಿವಾಲ್ವರ್ ವಿತರಣೆ ಮಾಡುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದೇಸಿ ನಿರ್ಮಿತ ಪಿಸ್ತೂಲ್ ಗಳನ್ನು 4000-5000 ರೂಪಾಯಿ ದರದಲ್ಲಿ ಅವರು ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಆಮದು ಮಾಡಿಕೊಳ್ಳಲಾದ ರಿವಾಲ್ವರ್ ಗಳನ್ನು 40 ರಿಂದ 50 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಹಣ ಪಾವತಿ ಮಾಡಿದ ತಕ್ಷಣ ಅಪೇಕ್ಷಿಸಿದ ಸ್ಥಳಗಳಲ್ಲಿ ರಿವಾಲ್ವರ್ ಗಳನ್ನು ಪೂರೈಸಲಾಗುತ್ತಿತ್ತು.
ಐದು ದೇಶಿ ನಿರ್ಮಿತ ಬಂದೂಕು, ಮೂರು ಆಮದು ಮಾಡಿಕೊಳ್ಳಲಾದ ಪಿಸ್ತೂಲು, ಎರಡು ಡಜನ್ ಗುಂಡು, ಒಂದು ಬೈಕ್ ಮತ್ತು ಕಾರನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
Click