ಶಾಲೆಗೆ ಬಂದಿಲ್ಲ, ಪಾಠನೂ ಮಾಡಿಲ್ಲ, ಆದ್ರೂ 6 ವರ್ಷಗಳಿಂದ ಸಂಬಳ ಪಡೆಯುತ್ತಿದ್ದ ಶಿಕ್ಷಕಿ..! 2920 ದಿನಗಳಲ್ಲಿ 759 ದಿನಗಳು ಮಾತ್ರ ಕೆಲಸ..!

ನ್ಯೂಸ್ ನಾಟೌಟ್: ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳನ್ನು ನೀಡಿ ಜೊತೆಗೆ ಶಿಕ್ಷಕರಿಗೆ ಉತ್ತಮ ವೇತನವನ್ನೂ ನೀಡುತ್ತಿದೆ. ಆ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡು ಒಬ್ಬ ಶಿಕ್ಷಕಿ ವಂಚಿಸಿದ ಘಟನೆ ನಡೆದಿದೆ. ಈ ಕಾರಣದಿಂದ ಒಬ್ಬ ಶಿಕ್ಷಕಿಯನ್ನು ಮೀರತ್‌ ನ ಶಿಕ್ಷಣ ಅಧಿಕಾರಿ ಆಶಾ ಚೌಧರಿ ಅಮಾನತ್ತುಗೊಳಿಸಿದ್ದಾರೆ. ಉತ್ತರ ಪ್ರದೇಶದ ಮೀರತ್‌ನ ಪರೀಕ್ಷಿತ್‌ ಗಢ್‌ನಲ್ಲಿರುವ ಪ್ರಾಥಮಿಕ ಶಾಲೆಗೆ ಸಂಬಂಧಿಸಿದೆ. ಇಲ್ಲಿ ಶಿಕ್ಷಕಿಯ ನೇಮಕದ ನಂತರ ಶಾಲೆಗೆ ಬರುವುದನ್ನೇ ನಿಲ್ಲಿಸಿದರಂತೆ. ಶಿಕ್ಷಕಿ ಕೆಲಸಕ್ಕೆ ನೇಮಕಗೊಂಡ ಬಳಿಕ 2920 ದಿನಗಳಲ್ಲಿ 759 ದಿನಗಳು ಮಾತ್ರ ಶಾಲೆಗೆ ಹಾಜರಾಗಿದ್ದರಂತೆ. ಉಳಿದ ದಿನಗಳಲ್ಲಿ ಶಾಲೆ ಗೈರಾಗಿರುವ ವಿಚಾರ ಬೆಳಕಿಗೆ ಬಂದಿದೆ. ಆದರೆ ಶಾಲೆಗೆ ಬಾರದೆ ಇದ್ದರೂ ಆ ಶಿಕ್ಷಕಿಯ ಖಾತೆಗೆ ನಿರಂತರವಾಗಿ ಪ್ರತಿ ತಿಂಗಳು ಸಂಬಳ ಮಾತ್ರ ಜಮಾ ಆಗುತ್ತಿತ್ತಂತೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಶಿಕ್ಷಕರ ಹಾಜರಾತಿ ನಿರಂತರವಾಗಿ ಕಡಿಮೆಯಾಗಿರುವುದು ಕಂಡು ಬಂದಿದ್ದು, ಸದ್ಯ ಆತನ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಶಿಕ್ಷಕಿ ಸುಜಾತಾ ಯಾದವ್ ಬಹಳ ದಿನಗಳಿಂದ ಶಾಲೆಗೆ ಬಂದಿರಲಿಲ್ಲ. ಅವರ ಗೈರು ಹಾಜರಿಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ತೊಂದರೆಯಾಗುತ್ತಿದೆ. ರಜೆ ಅರ್ಜಿಗಳನ್ನು ಮತ್ತೆ ಮತ್ತೆ ಅನುಮೋದಿಸಿದಾಗ ಈ ವಿಷಯ ಗಮನಕ್ಕೆ ಬಂದಿದೆ. ಶಿಕ್ಷಕಕಿ ಹಾಜರಾತಿ ದಾಖಲಾತಿ ಪರಿಶೀಲಿಸಿದಾಗ ಶಾಲೆಗೆ ಬಾರದಿದ್ದರೂ ಪರಿಪೂರ್ಣ ಹಾಜರಾತಿ ಕಾಯ್ದುಕೊಂಡಿರುವುದು ಕಂಡುಬಂದಿದೆ. ಶಿಕ್ಷಕಿಯನ್ನು ಅಮಾನತ್ತುಗೊಳಿಸಲಾಗಿದೆ. ಆದರೆ ಇದಕ್ಕೆ ಸಹಾಯ ಮಾಡಿದ್ದ ಶಾಲೆಯ ಪ್ರಾಂಶುಪಾಲ ಧರಂ ಸಿಂಗ್ ಎಂಬವರು ಕೂಡ ಅಗಲಿದ್ದಾರೆ. Click