ನ್ಯೂಸ್ ನಾಟೌಟ್ : ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂ.ಜಾ.ವೇ ಹಿಂಪಡೆದಿದೆ. ಸಂಜೀವ ಪೂಜಾರಿಯನ್ನ ಸಂಜೆಯ ಒಳಗಡೆ ಬಂಧಿಸುವುದಾಗಿ ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಭರವಸೆ ನೀಡಿದ್ದರು. ಅಂತೆಯೇ ಅರಣ್ಯ ಸಂರಕ್ಷಣಾ ಅಧಿಕಾರಿ ಸಂಜೀವ ಪೂಜಾರಿಯವರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಈ ಹಿನ್ನೆಲೆ ಹಿಂಜಾವೇ ಪ್ರತಿಭಟನೆಯನ್ನ ಹಿಂಪಡೆದರು. ಬಿಲ್ಲವ ಸಮಾಜದ ಹೆಣ್ಣುಮಕ್ಕಳ ಬಗ್ಗೆ ಮತ್ತು ಭಜನೆ ಮಾಡುವ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಪದ ಬಳಸಿ ಅವಮಾನ ಮಾಡಿರುವುವ ಆರೋಪದಲ್ಲಿ ಅರಣ್ಯ ಅಧಿಕಾರಿಯನ್ನು ಬಂಧಿಸಲಾಗಿದೆ.
ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಭಜನೆ ಮಾಡುವ ಮೂಲಕ ಪುತ್ತೂರು ಡಿವೈಎಸ್ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.ಇದೀಗ ಬೆಳ್ಳಾರೆ ಪೊಲೀಸರು ಆರೋಪಿ ಸಂಜೀವ ಪೂಜಾರಿಯವರನ್ನು ಮನೆಯಿಂದಲೇ ಬಂಧಿಸಿದ್ದಾರೆ.
Click