ನ್ಯೂಸ್ ನಾಟೌಟ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆತನ ಗೆಳತಿ ಪವಿತ್ರಾ ಗೌಡ ಜೈಲು ಪಾಲಾಗಿದ್ದು, ಸದ್ಯ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಎ2 ಆರೋಪಿ ದರ್ಶನ್ಗೆ ಜಾಮೀನು ಸಿಗಬೇಕು ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಬಲವಾಗಿ ವಾದಿಸಿದ್ದಾರೆ. ಮತ್ತೊಂದು ಕಡೆ ಎ1 ಆರೋಪಿ ಪವಿತ್ರಾ ಗೌಡ ಪರ ವಕೀಲರು ಕೂಡ ಜಾಮೀನು ಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಮಂಗಳವಾರ ನಡೆದ ಜಾಮೀನು ಅರ್ಜಿ ಕುರಿತಂತೆ ವಾದ-ಪ್ರತಿವಾದದ ಸಂದರ್ಭದಲ್ಲಿ ಎಸ್ಪಿಪಿ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ರೇಣುಕಾಸ್ವಾಮಿ ಇನ್ಸ್ಟಾಗ್ರಾಂನಿಂದ ಮೆಸೇಜ್ ಮಾಡಿದ್ದಾನೆ, ಆದರೆ ಆತ ಯಾರು ಅಂತಾನೆ ಗೊತ್ತಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದ ಮಾಡಿದ್ದಾರೆ. ಆದರೆ ರೇಣುಕಾಸ್ವಾಮಿ ಫೆಬ್ರವರಿಯಿಂದಲೇ ಪವಿತ್ರಾಗೌಡಗೆ ಮೆಸೇಜ್ ಮಾಡ್ತಿದ್ದ ಎಂದು ಎಸ್ಪಿಪಿ ಪ್ರಸನ್ನಕುಮಾರ್ ವಾದಿಸಿದ್ದಾರೆ.
ಫೆಬ್ರವರಿ ತಿಂಗಳಿನಿಂದಲೇ ರೇಣುಕಾಸ್ವಾಮಿ ಮೆಸೇಜ್ ಮಾಡುತ್ತಿದ್ದ, ಜೂನ್ನಲ್ಲಿ ಪವಿತ್ರಾ ಗೌಡ ರೇಣುಕಾಸ್ವಾಮಿ ಜೊತೆ ಫೋನ್ನಲ್ಲಿ ಮಾತನಾಡಿದ್ದಾರೆ. ನಿನ್ನ ನಂಬರ್ ಕೊಡು ಎಂದು ಪವಿತ್ರಾ ಗೌಡ ಮೆಸೇಜ್ ಕೂಡ ಮಾಡಿದ್ದಾರೆ. ರೇಣುಕಾಸ್ವಾಮಿ ನಂಬರ್ ಪಡೆದ ಪವಿತ್ರಾ ಗೌಡ, ತಮ್ಮ ನಂಬರ್ ಬದಲಾಗಿ ಪವನ್ ನಂಬರ್ ಅನ್ನು ರೇಣುಕಾಸ್ವಾಮಿಗೆ ಕೊಟ್ಟಿದ್ದಾರೆ ಎಂದು ಎಸ್ಪಿಪಿ ವಾದಿಸಿದ್ದಾರೆ.
ರೇಣುಕಾಸ್ವಾಮಿಗೆ ನಂಬರ್ ಕಳುಹಿಸಿದ ಪವಿತ್ರಾ ಗೌಡ ಇದೇ ಕಾಲ್ ಮಾಡುವಂತೆ ಕೇಳಿದ್ದಾರೆ. ರೇಣುಕಾಸ್ವಾಮಿ ಕೂಡ ಕರೆ ಮಾಡಿ ಮಾತನಾಡಿದ್ದಾನೆ. ಖಾಸಗಿ ಅಂಗದ ಅಶ್ಲೀಲ ಫೋಟೊಗಳನ್ನು ಕಳಿಸಿದ್ದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕೂಡ ಕಳಿಸಿ ಹೇಗಿದೆ ಎಂದು ಕೇಳಿದ್ದು, ಇದಕ್ಕೆ ಸೂಪರ್ ಎಂದು ಪವಿತ್ರಗೌಡ ಪ್ರತಿಕ್ರಿಯೆ ನೀಡಲಾಗಿದೆ ಎಂದು ಎಸ್ಪಿಪಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Click