ನ್ಯೂಸ್ ನಾಟೌಟ್: ಹಿಂದೂ ಧರ್ಮದ ಪರ ಮಾತನಾಡುವವರ ಮೇಲೆಯೇ ಕೇಸು ದಾಖಲಿಸುತ್ತಿರುವ ಹಿಂದೂ ವಿರೋಧಿ ರಾಜ್ಯ ಸರ್ಕಾರಕ್ಕೆ ನನ್ನ ದಿಕ್ಕಾರವಿದೆ ಎಂದು ಹಿಂದೂ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಕಾರ್ಕಳದ ರಮಿತಾ ಶೈಲೇಂದ್ರ ತಿಳಿಸಿದ್ದಾರೆ.
ಸಮಾಜದಲ್ಲಿ ಶಾಂತಿ ನೆಮ್ಮದಿಯ ಜೊತೆಗೆ ಧರ್ಮ ಶಿಕ್ಷಣದ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಅರುಣ್ ಉಳ್ಳಾಲ ಅವರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿರುವ ಪೊಲೀಸರ ನಿರ್ಧಾರವನ್ನು ಅವರು ಕಟು ಪದಗಳಿಂದ ಟೀಕಿಸಿದ್ದಾರೆ.
‘ಹಿಂದೂ ಸಂಸ್ಕೃತಿ ಬಗ್ಗೆ ಉಪನ್ಯಾಸಕರ ಮೇಲೆ ಕೇಸು ದಾಖಲು ಮಾಡುವುದು ಯಾವ ನ್ಯಾಯ..? ಸರ್ಕಾರ ಕೂಡ ಸಮಾಜದಲ್ಲಿ ಅಶಾಂತಿ ಪ್ರೋತ್ಸಾಹಿಸುವವರ ಪರ ನಿಂತಿದೆಯೇ..? ಅನ್ನುವ ಅನುಮಾನ ಮೂಡಿಸುತ್ತಿದೆ. ಮಂಗಳೂರು ಪೊಲೀಸರು ರಾಜ್ಯ ಸರ್ಕಾರಕ್ಕೆ ಖುಷಿ ಪಡಿಸುವಂತಹ ಕೆಲಸ ಮಾಡುತ್ತಿದ್ದಾರೆಯೇ..? ಐವಾನ್ ಡಿಸೋಜಾ ರಾಜ್ಯಪಾಲರ ವಿರುದ್ಧ ಅಸಂವಿಧಾನಿಕವಾಗಿ ಮಾತನಾಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳದ ರಾಜ್ಯ ಸರ್ಕಾರ ಅರುಣ್ ಉಳ್ಳಾಲ ಅವರ ಹೇಳಿಕೆಯನ್ನು ಮಾತ್ರ ದೊಡ್ಡ ಅಪರಾಧ ಎಂಬಂತೆ ಬಿಂಬಿಸಿ ಕೇಸ್ ದಾಖಲಿಸಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ’ ಎಂದು ತಿಳಿಸಿದ್ದಾರೆ.