ನ್ಯೂಸ್ ನಾಟೌಟ್: ಶನಿವಾರ ರಾತ್ರಿ ಚಿಕಿತ್ಸೆಗೆಂದು ಶ್ರೀರಾಂಪೇಟೆಯ ಕ್ಲಿನಿಕ್ಗೆ ಬಂದಿದ್ದ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಮಹಿಳೆಯೊಬ್ಬರು ವಾಪಾಸಾಗುವ ವೇಳೆ ಅವರ ಕಪ್ಪು ಬಣ್ಣದ ಪರ್ಸ್ ಕಳೆದುಹೋಗಿರುತ್ತದೆ.
ಪರ್ಸ್ನಲ್ಲಿ ನಗದು, ಔಷಧಿ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳಿದ್ದವು. ರಾತ್ರಿ ಆಟೋದಲ್ಲಿ ವಾಪಾಸಾಗುವ ವೇಳೆ ಬಿದ್ದಿರಬಹುದು ಎನ್ನಲಾಗಿದೆ. ಮಹಿಳೆ ಮನೆಗೆ ತಲುಪಿದ ಬಳಿಕ ಈ ವಿಚಾರ ಅವರ ಗಮನಕ್ಕೆ ಬಂದಿದೆ. ಇದೀಗ ಭಾನುವಾರ ಬೆಳಗ್ಗೆ ಕ್ಲಿನಿಕ್ಗೆ ಬಂದು ವಿಚಾರಿಸಿ ಬಳಿಕ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಯಾರಿಗಾದರೂ ಸಿಕ್ಕಿದ್ದಲ್ಲಿ ಈ 7760375605 ಸಂಖ್ಯೆಯನ್ನು ಸಂಪರ್ಕಿಸುವಂತೆ ಮಹಿಳೆಯ ಮನೆಯವರು ಮನವಿ ಮಾಡಿದ್ದಾರೆ.