- +91 73497 60202
- [email protected]
- November 22, 2024 12:52 AM
ನ್ಯೂಸ್ ನಾಟೌಟ್: `ಅವರ ಅಪ್ಪ ಅಮ್ಮ ಅವರಿಗೆ ಒಳ್ಳೆಯದಾಗಲೆಂದು ಭಗವಾನ್ ಎಂದು ಹೆಸರಿಟ್ಟಿದ್ದಾರೆ. ಅವರು ನೋಡಿದರೆ ರಾಕ್ಷಸಿ ದೃಷ್ಟಿಯಲ್ಲಿ ಯೋಚಿಸುತ್ತಾರೆ” ಎಂದು ಪ್ರಗತಿಪರ ಚಿಂತಕ ಪ್ರೊ ಭಗವಾನ್ ಅವರ ಬಗ್ಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಯ ವೇಳೆ ಹಿಂದೂ ಧರ್ಮದ ಅವಹೇಳನ ಮಾಡಿರುವ ಪ್ರೊ ಭಗವಾನ್ ವಿರುದ್ಧ ಮಂಗಳೂರಿನಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಪ್ರೊ ಭಗವಾನ್ ಅವರಂತವರು ಮೊದಲಿನಿಂದಲೂ ಇದ್ದಾರೆ. ಆಗಲೂ ಇದ್ದರು ಈಗಲೂ ಇದ್ದಾರೆ. ಅದೊಂದು ರಾಕ್ಷಸಿ ವಂಶ. ಅದಕ್ಕೋಸ್ಕರ ರಾಕ್ಷಸರನ್ನು ಆರಾಧನೆ ಮಾಡುತ್ತಾರೆ. ಯಾರೂ ಮನುಷ್ಯರಾಗಿದ್ದರೋ ಅವರು ರಾಕ್ಷಸರನ್ನು ಪೂಜಿಸೋದಿಲ್ಲ. ರಾಕ್ಷಸರು ರಾಕ್ಷಸರನ್ನೇ ಪೂಜಿಸುತ್ತಾರೆ. ರಾಕ್ಷಸರು ಒಂದು ದಿನ ನಾಶವಾಗುತ್ತಾರೆ. ಭಗವಾನ್ ಈ ಹಿಂದಿನಿಂದಲೂ ಹುಚ್ಚುಹುಚ್ಚು ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಅವನ ಅಪ್ಪ ಅಮ್ಮ ಅವನಿಗೆ ಒಳ್ಳೆಯದಾಗಲೆಂದು ಭಗವಾನ್ ಎಂದು ಹೆಸರಿಟ್ಟಿದ್ದಾರೆ. ಇವನು ನೋಡಿದರೆ ರಾಕ್ಷಸಿ ದೃಷ್ಟಿಯಲ್ಲಿ ಯೋಚಿಸುತ್ತಾನೆ. ಹಿಂದೆ ರಾಕ್ಷಸರಿದ್ದರು ಸಜ್ಜನರೂ ಇದ್ದರು. ಕೊನೆಗೆ ಗೆಲುವಾಗಿದ್ದು ಸಜ್ಜನರಿಗೆ ಎಂದರು. ಸಾವಿರಾರು ವರ್ಷಗಳ ಹಿಂದೆ ಬ್ರಿಟಿಷ್ ಸರ್ಕಾರ ದೇವಸ್ಥಾನದ ಸಂಪತ್ತನ್ನು ಕೊಳ್ಳೆ ಹೊಡೆಯಲು ಬ್ರಿಟಿಷ್ ಸರಕಾರ ದೇವಾಲಯದ ಸಂಪತ್ತನ್ನ ಕೊಳ್ಳೆ ಹೊಡೆಯಲು ಸರ್ಕಾರದ ಅಧೀನಕ್ಕೆ ತಂದಿತ್ತು. ಅದೇ ಮುಸಲ್ಮಾನರಿಗೆ ಮಸೀದಿ ನಡೆಸಲು ಹಾಗೂ ಕ್ರೈಸ್ತರಿಗೆ ಚರ್ಚ್ ನಡೆಸಲು ಅವರಿಗೆ ಅವಕಾಶ ನೀಡಿದ್ದಾರೆ. ಅದು ಒಳ್ಳೆಯದು. ಅದಕ್ಕೆ ನಮ್ಮ ತಕರಾರರಿಲ್ಲ. ಆದರೆ ಹಿಂದೂಗಳ ದೇವಸ್ಥಾನವನ್ನು ಸರ್ಕಾರ ಯಾಕೆ ಅಧೀನಕ್ಕೆ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ