ನ್ಯೂಸ್ ನಾಟೌಟ್: ಹರ್ಯಾಣ ಚುನಾವಣೆಯಲ್ಲಿ ಜೂಲಾನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕುಸ್ತಿ ಪಟು ವಿನೇಶ್ ಫೋಗಟ್ ಗೆ ಹಿನ್ನಡೆಯಾಗಿದೆ.
ಗಂಟೆ10.40 ರ ಸುಮಾರಿಗೆ ಬಿಜೆಪಿ ಅಭ್ಯರ್ಥಿ ಯೋಗೇಶ್ ಕುಮಾರ್ 2,128 ಮತಗಳ ಮುನ್ನಡೆ ಸಾಧಿಸಿದ್ದಾರೆ. ಯೋಗೇಶ್ ಕುಮಾರ್ ಅವರಿಗೆ 9,404 ಮತಗಳು ಬಿದ್ದರೆ ವಿನೇಶ್ ಫೋಗಟ್ ಅವರಿಗೆ 7,276 ಮತಗಳು ಬಿದ್ದಿದೆ.
ಬೆಳಗ್ಗೆ ಬೆಳಗ್ಗೆ 9 ಗಂಟೆಯ ವೇಳೆಗೆ ವಿನೇಶ್ ಫೋಗಟ್ 2012 ಮತಗಳ ಮುನ್ನಡೆ ಸಾಧಿಸಿದ್ದರು. ಒಟ್ಟು 15 ಸುತ್ತುಗಳಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಮಾತ್ರ ಮುಕ್ತಾಯವಾಗಿದೆ.
ಹರ್ಯಾಣ ಚುನಾವಣಾ ಫಲಿತಾಂಶದ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ. ಆರಂಭದ ಮತ ಎಣಿಕೆ ವೇಳೆ ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸಿತ್ತು. ಆದರೆ ನಂತರ ಬಿಜೆಪಿ ಮುನ್ನಡೆ ಸಾಧಿಸಿದೆ.
ಬೆಳಗ್ಗೆ 10:30ರ ಟ್ರೆಂಡ್ ಪ್ರಕಾರ ಬಿಜೆಪಿ 47, ಕಾಂಗ್ರೆಸ್ 35, ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇತರರು 8 ಮಂದಿ ಪೈಕಿ 3 ಮಂದಿ ಬಿಜೆಪಿ ರೆಬೆಲ್ಗಳಾಗಿರುವುದು ವಿಶೇಷ ಎಂಬಂತಿದೆ. ಮತ ಎಣಿಕೆಯ ಮೂರನೇ ಹಂತ ಮುಂದುವರಿದಿದ್ದು ಇನ್ನೂ ಹಾವು ಏಣಿಯ ಆಟ ಮುಂದುವರಿದಿದೆ.
Click