ನ್ಯೂಸ್ ನಾಟೌಟ್: ಪೆರಾಜೆಯಲ್ಲಿ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಹಠಾತ್ ಕುಸಿದು ಬಿದ್ದು ಇಂದು ಸಂಜೆ ಮೃತಪಟ್ಟಿದ್ದಾರೆ.
ಪೆರಾಜೆ ಕುಂಡಡು ಅಂಗನವಾಡಿ ಸಹಾಯಕಿ ರವಿಕಲಾ ಕುಸಿದು ಬಿದ್ದು ಸಾವಿಗೀಡಾದವರು ಎಂದು ತಿಳಿದು ಬಂದಿದೆ. ಹೃದಯಾಘಾತವೇ ಸಾವಿಗೆ ಕಾರಣ ಎನ್ನಲಾಗಿದೆ. ಅವರಿಗೆ 35 ವರ್ಷ ವಾಗಿತ್ತು. ಮೃತದೇಹ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ ಎಂದು ತಿಳಿದು ಬಂದಿದೆ.