- +91 73497 60202
- [email protected]
- November 1, 2024 11:10 AM
ಆಗಸದಲ್ಲೇ ಪ್ಯಾರಾಚೂಟ್ ಗಳ ನಡುವೆ ಡಿಕ್ಕಿ..! ಪ್ಯಾರಾಗ್ಲೈಡರ್ ಅರಣ್ಯದೊಳಗೆ ಬಿದ್ದು ಸಾವು..!
ನ್ಯೂಸ್ ನಾಟೌಟ್: ಹಿಮಾಚಲ ಪ್ರದೇಶದ ಬಿರ್-ಬಿಲ್ಲಿಂಗ್ ನಲ್ಲಿ ಪ್ಯಾರಾಚೂಟ್ ಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಪ್ಯಾರಾಗ್ಲೈಡರ್ ಸಾವನ್ನಪ್ಪಿದ್ದಾನೆ. ನಿಯಂತ್ರಣ ತಪ್ಪಿ ಗಾಳಿಯಲ್ಲಿ ಮತ್ತೊಂದು ಪ್ಯಾರಾಗ್ಲೈಡರ್ ಗೆ ಡಿಕ್ಕಿ ಹೊಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಎರಡೂ ಪ್ಯಾರಾಗ್ಲೈಡರ್ ಗಳು ಪ್ರತ್ಯೇಕವಾಗಿ ಗಾಳಿಯಲ್ಲಿ ಹಾರುತ್ತಿದ್ದಾಗ ಇಂದು(ಅ.30) ಈ ಘಟನೆ ಸಂಭವಿಸಿದೆ. ಗಾಯಗೊಂಡಿರುವ ಮತ್ತೊಬ್ಬ ಪ್ಯಾರಾಗ್ಲೈಡರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಪ್ರಾಣಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಡಿಕ್ಕಿಯ ನಂತರ ಬೀಳುವ ಸಂದರ್ಭದಲ್ಲಿ ಪ್ಯಾರಾಗ್ಲೈಡರ್ ಮರಗಳ ನಡುವೆ ಸಿಕ್ಕಿಕೊಂಡಿದೆ. ಫೆಯರೆಟ್ಸ್ ನ ಮೃತದೇಹವನ್ನು ಗುರುತಿಸಲಾಗಿದೆ. ಆದರೆ ಇನ್ನೂ ಅರಣ್ಯದಿಂದ ತರಲಾಗಲಿಲ್ಲ. ಗಾಯಗೊಂಡಿರುವ ಪ್ಯಾರಾಗ್ಲೈಡರ್ ಯಾವ ದೇಶದವರು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಿರ್-ಬಿಲ್ಲಿಂಗ್ ಕಣಿವೆಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ಯಾರಾಗ್ಲೈಡರ್ ಆಂಡ್ರೆಜ್ ಅವರು ಬಿರ್-ಬಿಲ್ಲಿಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವಾಗ ಸಾವನ್ನಪ್ಪಿದ್ದರು ಎಂದು ಕಾಂಗ್ರಾ ಪೊಲೀಸ್ ವರಿಷ್ಠಾಧಿಕಾರಿ ಶಾಲಿನಿ ಅಗ್ನಿಹೋತ್ರಿ ತಿಳಿಸಿದ್ದಾರೆ. ಮನಾಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಇನ್ ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಅಂಡ್ ಅಲೈಡ್ ಸ್ಪೋರ್ಟ್ಸ್ (ಎಬಿವಿಮಾಸ್) ನಿರ್ದೇಶಕ ಅವಿನಾಶ್ ನೇಗಿ ಮಾತನಾಡಿ, ‘ಅಪಘಾತದ ಸ್ಥಳಗಳನ್ನು ಗುರುತಿಸಲು ಎತ್ತರದ ಪರ್ವತಗಳಲ್ಲಿ ವಿಶೇಷ ಟವರ್‌ಗಳನ್ನು ಅಳವಡಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ