- +91 73497 60202
- [email protected]
- November 24, 2024 5:48 AM
ನ್ಯೂಸ್ ನಾಟೌಟ್: ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಮರ್ ಅಬ್ದುಲ್ಲಾ ಇಂದು(ಅ.16) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ವೇದಿಕೆ ಸಿದ್ಧವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟವು ಜಯಗಳಿಸಿತು. ಒಮರ್ ಅಬ್ದುಲ್ಲಾ ಅವರ ಮಂತ್ರಿ ಮಂಡಳಿಯು ಅವರನ್ನು ಒಳಗೊಂಡಂತೆ ಒಟ್ಟು 10 ಸದಸ್ಯರನ್ನು ಹೊಂದಿರುತ್ತದೆ. ಇವರಲ್ಲಿ ಸಕೀನಾ ಇಟ್ಟು, ಸೈಫುಲ್ಲಾ ಮಿರ್, ಅಬ್ದುಲ್ ರಹೀಮ್ ರಾಥರ್, ಅಲಿ ಮೊಹಮ್ಮದ್ ಸಾಗರ್, ಸುರಿಂದರ್ ಸಿಂಗ್, ಅಜಯ್ ಸಾಧೋತ್ರಾ, ಪಿರ್ಜಾದಾ ಮೊಹಮ್ಮದ್ ಸೈಯದ್ ಮತ್ತು ಕೆಲವು ಸ್ವತಂತ್ರರು ಚುಣಾಯಿತ ಅಭ್ಯರ್ಥಿಗಳೂ ಸೇರಿದ್ದಾರೆ ಎನ್ನಲಾಗಿದೆ. ಚುನಾವಣೆಯಲ್ಲಿ 90 ಸ್ಥಾನಗಳಲ್ಲಿ ಎನ್‌ಸಿ 42 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿದೆ. ಒಟ್ಟಾಗಿ, ಎರಡು ಚುನಾವಣಾ ಪೂರ್ವ ಮಿತ್ರಪಕ್ಷಗಳು 95 ಸದಸ್ಯರ ಅಸೆಂಬ್ಲಿಯಲ್ಲಿ ಬಹುಮತವನ್ನು ಹೊಂದಿವೆ.ಇಂದು ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಜನರಲ್ ಮನೋಜ್ ಸಿನ್ಹಾ ಪ್ರಮಾಣ ವಚನ ಬೋಧಿಸಲಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ