ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಗ್ದ ಹೆಣ್ಣುಮಕ್ಕಳ ಮೇಲೆ ಮತಾಂಧ ಶಕ್ತಿಗಳ ಲವ್ ಜಿಹಾದ್ ಕೃತ್ಯ ಸದ್ದಿಲ್ಲದೆ ನಡೆಯುತ್ತಿದೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಹತ್ತೂರ ಒಡೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಸಿಕ್ಕಿದ ಚೀಟಿಯಲ್ಲಿ ಯುವತಿಗೆ ಕಿರುಕುಳ ನೀಡಿದಾತನ ಹೆಸರು ಬರೆದು ನ್ಯಾಯಕ್ಕಾಗಿ ದೇವರ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ.
ಮಗಳಿಗೆ ಕಿರುಕುಳ ನೀಡಿದಾತನಿಗೆ ಶಿಕ್ಷೆ ನೀಡಿದಂತೆ ಯುವತಿಯ ಪೋಷಕರು ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಕಾಣಿಕೆ ಹುಂಡಿಗೆ ಹಾಕಿದ ಚೀಟಿಯೊಂದು ಭಾರಿ ಸುದ್ದಿಯಾಗುತ್ತಿದೆ. ಚೀಟಿಯಲ್ಲಿ ‘ಸಮೀರ್ ನಿಂದಾಗಿ ನನ್ನ ಮಗಳ ಜೀವನ ಹಾಳಾಗಿದೆ’ ‘ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ’ ‘ನಮ್ಮ ಜೀವನ ಹಾಳು ಮಾಡಿದ ಸಮೀರ್ ನ ಜೀವನ ಕೂಡ ಹಾಳಾಗಬೇಕು. ‘ಸಮೀರ್ ನಿಗೆ ಮದುವೆ ಆಗಲು ಹುಡುಗಿ ಸಿಗಬಾರದು’ ‘ಓ ದೇವರೇ ಇದು ನನ್ನ ಪ್ರಾರ್ಥನೆ’ ಎಂದು ಯುವತಿಯ ಪೋಷಕರು ಕಿರುಕುಳ ನೀಡಿದಾತನಿಗೆ ಪುತ್ತೂರಿನ ಒಡೆಯನೇ ಸರಿಯಾದ ಶಿಕ್ಷೆ ನೀಡಬೇಕು ಎಂದು ಪ್ರಾರ್ಥನೆ ಮಾಡಿ ಹುಂಡಿಗೆ ಚೀಟಿ ಹಾಕಿದ್ದಾರೆ. ಕಾಣಿಕೆ ಹುಂಡಿಯ ಲೆಕ್ಕ ಮಾಡುವ ಸಂದರ್ಭ ಈ ಚೀಟಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.