ನ್ಯೂಸ್ ನಾಟೌಟ್: ` ಇಲ್ಲೊಬ್ಬ ಬಾಲಕ ಕೂಡಾ ಶಾಲೆಯಿಂದ ಬಂದ ಕೂಡಲೇ ಹೋಮ್ ವರ್ಕ್ ಮಾಡದೇ ಮೊಬೈಲ್ ಹಿಡಿದು ಕುಳಿತಿದ್ದು, ಇದನ್ನು ಗಮನಿಸಿದ ತಾಯಿ ಆತನ ಕೈಯಿಂದ ಮೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಕೋಪಕೊಂಡ ಆ ಬಾಲಕ ತಾಯಿಯ ತಲೆಗೆ ಬ್ಯಾಟ್ ನಿಂದ ಹೊಡೆದಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಮಕ್ಕಳು ಮೊಬೈಲ್ ಬಳಸದಂತೆ ಜಾಗೃತಿ ಮೂಡಿಸಲು ಮಾಡಿದ ವಿಡಿಯೋ ಆಗಿರಬಹುದು ಎಂದು ಹೇಳಲಾಗಿದೆ.
ಚಿಕ್ಕ ಮಕ್ಕಳಿಗೆ ಮೊಬೈಲ್ ಕೊಟ್ಟ ಪರಿಣಾಮ, ಈ ಮಗು ಹೇಗೆ ತನ್ನ ತಾಯಿಯ ಪ್ರಾಣಕ್ಕೆ ಕುತ್ತು ತಂದಿದೆ ನೋಡಿʼ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳಲಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮೊಬೈಲ್ ಪಕ್ಕಕ್ಕಿಟ್ಟು ಓದಿದ್ರೆ ಸರಿ ಇವಾಗ ಎಂದು ತಾಯಿಯೊಬ್ಬರು ತಮ್ಮ ಮಗನಿಗೆ ಗದರುತ್ತಿರುವ ದೃಶ್ಯವನ್ನು ಕಾಣಬಹುದು. ತಾಯಿ ತನ್ನ ಮಗನ ಕೈಯಿಂದ ಮೊಬೈಲ್ ಕಸಿದುಕೊಂಡಾಗ ಆತ ಪುಸ್ತಕ ತೆಗೆದುಕೊಂಡು ಓದಲು ಆರಂಭಿಸುತ್ತಾನೆ. ತಾಯಿಯೂ ಅಲ್ಲೇ ಕುಳಿತಿರುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಕೋಪದಿಂದ ಬಾಲಕ ಅಲ್ಲೇ ಇದ್ದ ಬ್ಯಾಟ್ನಿಂದ ತಾಯಿಯ ತಲೆಗೆ ಒಂದೇಟು ಕೊಟ್ಟು ತಾಯಿಯಿಂದ ಮೊಬೈಲ್ ಕಸಿದುಕೊಳ್ಳುತ್ತಾನೆ. ಈ ದೃಶ್ಯ ಮನೆಯಲ್ಲಿ ಅಳವಡಿಸಲಾದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಇದು ನಿಜ ಘಟನೆಯಲ್ಲ, ಸ್ಕ್ರಿಪ್ಟೆಡ್ ವಿಡಿಯೋ ಎನ್ನಲಾಗುತ್ತಿದೆ.
ಅಕ್ಟೋಬರ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.
Click