ಸೇನಾ ಆಂಬ್ಯುಲೆನ್ಸ್‌ ಗೆ ಗುಂಡು ಹಾರಿಸಿದ ಭಯೋತ್ಪಾದಕರು..! 3 ಭಯೋತ್ಪಾದಕರ ಹತ್ಯೆಯ ವೇಳೆ ಸೇನಾ ಶ್ವಾನ ಸಾವು..!

ನ್ಯೂಸ್ ನಾಟೌಟ್‌ : ಅಖ್ನೂರ್ ಸೆಕ್ಟರ್‌ ನ ಗಡಿ ನಿಯಂತ್ರಣ ರೇಖೆ ಬಳಿಯ ಹಳ್ಳಿಯೊಂದರ ಮೂಲಕ ಹಾದು ಹೋಗುತ್ತಿದ್ದ ಸೇನಾ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಿದ ಮೂವರು ಭಯೋತ್ಪಾದಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಮಂಗಳವಾರ(ಅ.29) ಬೆಳಗ್ಗೆ ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್‌ನ ಹಳ್ಳಿಯೊಂದರಲ್ಲಿ ಭಯೋತ್ಪಾದಕರು ಮತ್ತು ಸೇನಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ನೆಲೆಸಿರುವ ಉಗ್ರರ ಗುಂಪಿನ ವಿರುದ್ಧ ದಾಳಿ ನಡೆಸಿದರು. ಈ ವೇಳೆ ಸೇನೆಯ ಗುಂಡಿನ ದಾಳಿಗೆ ಮೂರು ಉಗ್ರರು ಸಾವನ್ನಪ್ಪಿದ್ದಾರೆ. ಸೋಮವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸಾಗುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ಆಂಬ್ಯುಲೆನ್ಸ್‌ ಗೆ ಗುಂಡು ಹಾರಿಸಿದ ಒಬ್ಬಾತನನ್ನು ವಿಶೇಷ ಪಡೆಗಳು ಮತ್ತು ಎನ್‌ಎಸ್‌ಜಿ ಕಮಾಂಡೋಗಳು ಹತ್ಯೆ ಮಾಡಿದ್ದರು. ಶೋಧ ಕಾರ್ಯಾಚರಣೆ ವೇಳೆ ತಲೆಮರೆಸಿಕೊಂಡಿದ್ದ ಇಬ್ಬರೂ ಭಯೋತ್ಪಾದಕರು ಬತ್ತಲ್ ಕೌರ್ ಪ್ರದೇಶದ ದೇವಸ್ಥಾನದಲ್ಲಿ ಅಡಗಿರುವುದು ಸೇನೆಗೆ ತಿಳಿದು ಬಂತು. ತಮ್ಮ ಸಹಚರನ ಸಾವಿನ ನಂತರ, ಇಬ್ಬರು ಭಯೋತ್ಪಾದಕರು ದೇವಾಲಯದ ಪಕ್ಕದ ನೆಲಮಾಳಿಗೆಯಲ್ಲಿ ಆಶ್ರಯ ಪಡೆದಿದ್ದರು. ಮಂಗಳವಾರ ಬೆಳಗ್ಗೆ ಮತ್ತೆ ಭದ್ರತಾ ಪಡೆಗಳ ಮೇಲೆ ಗ್ರೆನೇಡ್‌ಗಳನ್ನು ಎಸೆದು ಗುಂಡಿನ ದಾಳಿ ನಡೆಸಿದ್ದಾರೆ. ಆಗ ಮತ್ತೊಮ್ಮೆ ಗುಂಡಿನ ಚಕಮಕಿ ಆರಂಭವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಳಿದ ಇಬ್ಬರು ಉಗ್ರರು ಹತರಾಗಿದ್ದಾರೆ. ಈ ವೇಳೆ ನಾಲ್ಕು ವರ್ಷದ ಧೀರ ಎಂಬ ಸೇನಾ ಶ್ವಾನ ಗುಂಡು ತಗುಲಿ ಸಾವನ್ನಪ್ಪಿದೆ. Click