ನ್ಯೂಸ್ ನಾಟೌಟ್: ಕಾರ್ಮಿಕರ ಹಾಗೂ ಕುಟುಂಬಗಳ ಕಲ್ಯಾಣಕ್ಕಾಗಿ ತೆರೆಯಲಾಗಿರುವ ಕಾರ್ಮಿಕರ ರಾಜ್ಯ ವಿಮಾ ಆಸ್ಪತ್ರೆ (ESI)ಯಲ್ಲಿ ಕಳೆದ ಕೆಲವು ದಿನಗಳಿಂದ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿದೆ.
ಚಿಕಿತ್ಸೆಗಾಗಿ ಸುಳ್ಯದಿಂದ ತೆರಳಿದ್ದ ಕುಟುಂಬವೊಂದು ಮಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ವಾಪಸ್ ಆಗಿದ್ದಾರೆ. ವ್ಯಕ್ತಿಯೊಬ್ಬರು ಸುಳ್ಯದಿಂದ ತಮ್ಮ ತಾಯಿಯನ್ನು ಕಿಮೋ ಥೆರಪಿಗಾಗಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಹೋಗಿ ತಲುಪಿದ ಬಳಿಕವೇ ಚಿಕಿತ್ಸೆ ಸಿಗುವುದಿಲ್ಲ ಎಂದು ಇವರಿಗೆ ಗೊತ್ತಾಗಿದೆ. ESI ಆಸ್ಪತ್ರೆಗೆ ಈ ಹಿಂದೆ ಮೂವರು ರೋಗಿಗಳಿಗೆ ಕಿಮೋಥೆರಪಿ ನೀಡಿತ್ತು.
ಇದಕ್ಕೆ ತಗುಲಿದ್ದ ಹಣದ ಮೊತ್ತ ಇನ್ನೂ ಸರ್ಕಾರದಿಂದ ಪಾವತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ರೋಗಿಯ ಕಡೆಯವರೆ ದುಡ್ಡು ಕಟ್ಟಿ ಡಿಸ್ಚಾರ್ಜ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಠಾತ್ ಕಿಮೋ ಥೆರಪಿಗೆ ಸಾವಿರಾರು ರೂ. ಎಲ್ಲಿಂದ ತರುವುದು ಎಂದು ರೋಗಿಯ ಸಂಬಂಧಿಕರು ನ್ಯೂಸ್ ನಾಟೌಟ್ ಜೊತೆಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.