ನ್ಯೂಸ್ ನಾಟೌಟ್: ಕಲಬುರಗಿಯ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ಮೇಲ್ ಪ್ರಕರಣದ ವಿಚಾರವಾಗಿ ಕಾರಾಗೃಹ ಎಡಿಜಿಪಿ ಕಚೇರಿಯ ಎಸ್ಪಿ ಯಶೋಧಾ ಜೈಲಿಗೆ ಭೇಟಿ ನೀಡಿ ಇಂದು(ಅ.18) ಪರಿಶೀಲನೆ ನಡೆಸಿದ್ದಾರೆ.
ಜೈಲಿನಲ್ಲಿರುವ ಮಲ್ಲೇಶ್ವರಂ ಸ್ಫೋಟ ಪ್ರಕರಣದ ಆರೋಪಿ ಜುಲ್ಫೀಕರ್ ಹಾಗೂ ಆತನ ಗ್ಯಾಂಗ್, ಕೈದಿ ಸಾಗರ್ ಎಂಬಾತನನ್ನು ವಿಡಿಯೋ ಕರೆ ಮೂಲಕ ಹನಿಟ್ರ್ಯಾಪ್ ಜಾಲಕ್ಕೆ ದೂಡಲಾಗಿತ್ತು. ಈ ಪ್ರಕರಣ ಮುಚ್ಚಿ ಹಾಕಲು 50,000 ರೂ. ನೀಡುವಂತೆ ಆತನಿಗೆ ಬ್ಲ್ಯಾಕ್ಮೇಲ್ ಮಾಡಲಾಗಿತ್ತು. ಈ ವಿಚಾರವನ್ನು ಸಾಗರ್ ಆತನ ಸಹೋದರನೊಂದಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ.
ಇದೇ ಪ್ರಕರಣ ಬಳಸಿಕೊಂಡು ಜೈಲಿನ ಸಿಬ್ಬಂದಿಗೂ ಬ್ಲ್ಯಾಕ್ಮೇಲ್ ಮಾಡಲು ಜುಲ್ಫಿಕರ್ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.
Click