ನ್ಯೂಸ್ ನಾಟೌಟ್: ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಕರನ ಮನೆಯಲ್ಲಿ ಜೀವಂತವಾಗಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸುಮಾರು ಮೂರು ವರ್ಷಗಳ ಹಿಂದೆ ಮಹಿಳೆ ನಾಪತ್ತೆಯಾಗಿದ್ದಾಗ ಆಕೆಯ ಪತಿ ಹಾಗೂ ಅತ್ತೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಕೆಲ ಕಾಲದ ಬಳಿಕ ಆಕೆ ಜೀವಂತವಾಗಿಲ್ಲ ಎಂದು ನಂಬಲಾಗಿತ್ತು.
ಆಕೆಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು, 3 ವರ್ಷಗಳಿಂದ ಕಾಣಿಸಿಕೊಳ್ಳದ ಆಕೆ ಲಕ್ನೋದಲ್ಲಿ ಬಾಯ್ಫ್ರೆಂಡ್ ಜತೆ ಇರುವುದು ತಿಳಿದುಬಂದಿದೆ. ಕವಿತಾ ಎಂಬುವವರು 2017ರ ನವೆಂಬರ್ 17 ರಂದು ದಾದುಹಾ ಬಜಾರ್ನ ವಿನಯ್ ಎಂಬುವವರನ್ನು ವಿವಾಹವಾಗಿದ್ದರು, ಮೇ 5, 2021ರಿಂದ ಅತ್ತೆ ಮನೆಯಿಂದ ನಾಪತ್ತೆಯಾಗಿದ್ದಳು ಎನ್ನಲಾಗಿದೆ.
ಇದೇ ವೇಳೆ ಕವಿತಾ ಮನೆಯವರು ಆಕೆಯ ಅತ್ತೆ ಹಾಗೂ ಪತಿಯ ವಿರುದ್ಧ ದೂರು ದಾಖಲಿಸಿದ್ದರು. ಎಷ್ಟೇ ಹುಡುಕಿದರೂ ಅವರು ಎಲ್ಲಿದ್ದಾರೆ ಎಂಬುದು ತಿಳಿಯಲಿಲ್ಲ. ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ) ಮತ್ತು ಕೊತ್ವಾಲಿ ಪೊಲೀಸರು 3 ವರ್ಷಗಳ ಬಳಿಕ ಕವಿತಾ ರನ್ನು ಲಕ್ನೋದ ದಲಿಗಂಜ್ ಪ್ರದೇಶದಲ್ಲಿ ಆಕೆಯ ಗೆಳೆಯ ಸತ್ಯ ನಾರಾಯಣ ಗುಪ್ತಾ ಎಂಬವರ ನಿವಾಸದಲ್ಲಿ ಪತ್ತೆ ಮಾಡಿದ್ದಾರೆ.
ಸತ್ಯ ನಾರಾಯಣ್ ಗೊಂಡಾದ ದುರ್ಜನ್ಪುರ ಮಾರುಕಟ್ಟೆಯಲ್ಲಿ ಅಂಗಡಿಯನ್ನು ಹೊಂದಿದ್ದರು ಮತ್ತು ಕವಿತಾ ಅವರನ್ನು ಆಗಾಗ ಭೇಟಿ ಮಾಡುತ್ತಿದ್ದರು. ಅವರ ನಡುವೆ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ.
ಹಾಗಾಗಿ ಅವರು ಅಲ್ಲಿಂದ ಓಡಿಹೋಗುವ ಯೋಜನೆ ರೂಪಿಸಿದ್ದರು. ಲಕ್ನೋಗೆ ಹೋಗುವ ಮುನ್ನ ಒಂದು ವರ್ಷ ಅಯೋಧ್ಯೆಯಲ್ಲಿ ಸತ್ಯನಾರಾಯಣ ಅವರ ಜತೆ ಆಕೆ ವಾಸವಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
Click