- +91 73497 60202
- [email protected]
- November 1, 2024 11:56 AM
ನ್ಯೂಸ್ ನಾಟೌಟ್ : ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ಜಾಡು ಹಿಡಿದಿರುವ ಪೊಲೀಸರು ಇದೀಗ ಕೊನೆಗೂ ಕೊಲೆ ಆರೋಪಿ ನಟ ದರ್ಶನ್ ಗೆ ಮೊಬೈಲ್ ಹಾಗೂ ಸಿಮ್ ನೀಡಿದವರನ್ನು ಪತ್ತೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ರಹಸ್ಯವಾಗಿ ದರ್ಶನ್ ಗೆ ಸಿಮ್ ಕೊಟ್ಟಿದ್ದು ಹೇಗೆ ಎಂಬುದನ್ನೂ ಪತ್ತೆಹಚ್ಚಲಾಗಿದೆ. ರೌಡಿಶೀಟರ್ ಧರ್ಮನ ಮೊಬೈಲ್ ನಿಂದ ಬ್ಯಾಡರಹಳ್ಳಿ ರೌಡಿ ಶೀಟರ್ ಸತ್ಯನಿಗೆ ದರ್ಶನ್ ವಿಡಿಯೋ ಕಾಲ್ ಮಾಡಿದ್ದ ಬಗ್ಗೆ ಬಯಲಾಗಿದೆ. ಈ ಮೊಬೈಲ್ ಧರ್ಮನಿಗೆ ಸೇರಿತ್ತು ಎಂಬುದು ಗೊತ್ತಾಗಿದೆ. ಬಾಣಸವಾಡಿ ರೌಡಿ ಶೀಟರ್ ಧರ್ಮನಿಗೆ ಬಾಣಸವಾಡಿಯ ಟೂರ್ಸ್ ಆಂಡ್ ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್ ಎಂಬಾತ ಸಿಮ್ ನೀಡಿದ್ದ ಎಂಬುದು ಗೊತ್ತಾಗಿದೆ. ಬಾಣಸವಾಡಿಯಲ್ಲಿ ಒಂದು ಟೂರ್ಸ್ ಆಂಡ್ ಟ್ರಾವೆಲ್ಸ್ ನಡೆಸುವ ಮಣಿವಣ್ಣನ್, ಕಂಪನಿಯ ಚಾಲಕ ಯಾದವ್ ಹೆಸರಲ್ಲಿ ಸಿಮ್ ಖರೀದಿ ಮಾಡಿದ್ದ ಎನ್ನಲಾಗಿದೆ. ನಂತರ ಬಟ್ಟೆಯಲ್ಲಿ ಅಡಗಿಸಿ ಜೈಲಿಗೆ ಕಳುಹಿಸಿದ್ದ. ಮೊದಲು ಜೈಲಿನ ಕೆಲ ಭ್ರಷ್ಟ ಅಧಿಕಾರಿಗಳ ಮೂಲಕ ಮೊಬೈಲ್ ಸಹ ಕಳುಹಿಸಿದ್ದ ಎನ್ನಲಾಗಿದೆ.ರೌಡಿ ಧರ್ಮನಿಗಾಗಿ ಒನ್ ಪ್ಲಸ್ ಮೊಬೈಲ್ ಅನ್ನು ಮೆಜೆಸ್ಟಿಕ್ ಬಳಿಯ ಒಂದು ಮೊಬೈಲ್ ಅಂಗಡಿಯಿಂದ ಸೆಕೆಂಡ್ ಹ್ಯಾಂಡ್ ನಲ್ಲಿ ಖರೀದಿ ಮಾಡಿದ್ದ. ಮೊಬೈಲ್ ಖರೀದಿಗೂ ಮುನ್ನ ಮೊಬೈಲ್ ಫೋಟೋ ಕಳುಹಿಸಿ ಯಾವುದು ಬೇಕು ಎಂದು ಕೇಳಿದ್ದ. ಈ ಸಂಬಂಧ ಅಂಗಡಿ ಮಾಲೀಕನ ಮೊಬೈಲ್ನಿಂದ ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ವೇಳೆ ಎರಡು ಮೊಬೈಲ್ ಫೋಟೋ ಕಳುಹಿಸಿ ಒಂದು ಮೊಬೈಲ್ ಆಯ್ಕೆ ಮಾಡುವಂತೆ ಹೇಳಿದ್ದು, ನಂತರ ಒನ್ ಪ್ಲಸ್ ಮೊಬೈಲ್ ಆಯ್ಕೆ ಮಾಡಿಕೊಂಡ ವಿಚಾರ ತನಿಖೆಯಿಂದ ಬಯಲಾಗಿದೆ. ಈಗ ಮೊಬೈಲ್ ಅಂಗಡಿ ಮಾಲೀಕನನ್ನು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.ಟ್ರಾವೆಲ್ಸ್ ಮಾಲೀಕ ಮಣಿವಣ್ಣನ್ ಬಂಧಿಸಿದ್ದ ಪೊಲೀಸರು ಸದ್ಯ ಠಾಣೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಕಾಲ್ ನ ವಿಡಿಯೋ ವೈರಲ್ ಆಗುತ್ತಿದ್ದಂತೆ ಧರ್ಮ ಮೊಬೈಲ್ ಮತ್ತು ಸಿಮ್ ಜಜ್ಜಿ ಟಾಯ್ಲೆಟ್ನಲ್ಲಿ ಹಾಕಿ ನೀರು ಸುರಿದಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ, ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ