ಒಂದೇ ನಗರದಲ್ಲಿ 6 ತಿಂಗಳಲ್ಲಿ 14 ಸಾವಿರ ಜನರಿಗೆ ಕಚ್ಚಿದ ಬೀದಿ ನಾಯಿಗಳು..! ಪ್ರಾಣಿ ದಯಾ ಸಂಘಗಳ ಆರೋಪವೇನು..?

ನ್ಯೂಸ್ ನಾಟೌಟ್ : ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಒಂದಿಲ್ಲೊಂದು ಕಡೆ ಬೀದಿ ನಾಯಿಗಳಿಂದ ಸಾರ್ವಜನಿಕರು ಕಡಿಸಿಕೊಳ್ಳುವ ಸುದ್ದಿ ವರದಿಯಾಗುತ್ತಲೇ ಇದೆ. ಕಳೆದ 6 ತಿಂಗಳಲ್ಲಿ ಬೆಂಗಳೂರಿನಲ್ಲಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಳವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಲ್ಲಿ ಅಂದರೆ ಏಪ್ರಿಲ್‌ ಮತ್ತು ಸೆಪ್ಟೆಂಬರ್‌ ನಡುವೆ 13,748 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಇತ್ತೀಚೆಗೆ ಜಾಲಹಳ್ಳಿ ವ್ಯಾಪ್ತಿಯಲ್ಲಿ ನಾಯಿ ಕಡಿದಿದ್ದರಿಂದ ನಿವೃತ್ತ ಶಿಕ್ಷಕಿಯೊಬ್ಬರು ನಿಧನರಾಗಿದ್ದರು. ಈ ಪ್ರಕರಣದ ನಂತರ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಾಯಿಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಬಿಬಿಎಂಪಿ ಕೆಲವೊಂದು ಕ್ರಮಗಳನ್ನು ಘೋಷಿಸಿತ್ತು. ಪಶುಸಂಗೋಪನೆ ಇಲಾಖೆಯ ವರದಿಗಳ ಪ್ರಕಾರ, ಮೇ ತಿಂಗಳಲ್ಲಿ ಅತಿ ಹೆಚ್ಚು ಅಂದರೆ 3,047 ನಾಯಿ ಕಡಿತದ ಪ್ರಕರಣಗಳು ವರದಿಯಾಗಿವೆ. ಅತಿ ಕಡಿಮೆ ಪ್ರಕರಣಗಳು ಆಗಸ್ಟ್‌ನಲ್ಲಿ ವರದಿಯಾಗಿದ್ದು, ಈ ತಿಂಗಳಲ್ಲಿ 1,934 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ವಾರ್ಷಿಕ 30 ಸಾವಿರದಿಂದ 35 ಸಾವಿರ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಿವೆ. ಪ್ರಾಣಿ ದಯಾ ಸಂಘಗಳು ಬೇರೆಯದ್ದೆ ಆದ ಆರೋಪ ಮಾಡುತ್ತಿವೆ. ಸಾಕು ನಾಯಿಗಲೂ ಮತ್ತು ಬೀದಿ ನಾಯಿಗಳನ್ನು ಗುರುತಿಸಲು ಬಿಬಿಎಂಪಿ ಬಳಿ ಯಾವುದೇ ಯೋಜನೆಗಳಿಲ್ಲ. ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿವೆ. Click