ಕನ್ನಡದ ಹಿರಿಯ ನಿರ್ದೇಶಕ ದತ್ತರಾಜ್ ನಿಧನ..! ರಾಜ್ ಕುಮಾರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಡೈರೆಕ್ಟರ್ ಇನ್ನಿಲ್ಲ..!

ನ್ಯೂಸ್ ನಾಟೌಟ್: ಕನ್ನಡ ಚಿತ್ರರಂಗದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ಇಂದು (ಅಕ್ಟೋಬರ್ 14) ನಿಧನ ಹೊಂದಿದ್ದಾರೆ. ಅವರಗೆ 87 ವರ್ಷ ವಯಸ್ಸಾಗಿತ್ತು. ಚಿ.ದತ್ತರಾಜ್ ಅವರು ಖ್ಯಾತ ಗೀತ ಸಾಹಿತಿ, ಸಂಭಾಷಾಣಕಾರ ಚಿ. ಉದಯಶಂಕರ್ ಅವರ ಸಹೋದರರಾಗಿದ್ದಾರೆ.ರಾಜ್​ಕುಮಾರ್ ಬಳಿಕ ಶಿವರಾಜ್​ಕುಮಾರ್ ಜೊತೆಯೂ ಕೆಲಸ ಮಾಡುವ ಅವಕಾಶ ದತ್ತರಾಜ್ ಅವರಿಗೆ ಸಿಕ್ಕಿತ್ತು. ಶಿವರಾಜಕುಮಾರ್ ಅಭಿನಯದ ‘ಮೃತ್ಯುಂಜಯ’, ‘ಆನಂದ ಜ್ಯೋತಿ’ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶನ ಮಾಡಿದ್ದರು. ದತ್ತರಾಜ್​ ಅವರಿಗೆ ರಾಜ್​ಕುಮಾರ್ ಕುಟುಂಬದ ಜೊತೆ ಒಳ್ಳೆಯ ಆಪ್ತತೆ ಇತ್ತು. ಅವರು ರಾಜ್​ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ದರು. ಅಣ್ಣಾವ್ರು ನಟಿಸಿದ ‘ಕೆರಳಿದ ಸಿಂಹ’, ‘ಕಾಮನಬಿಲ್ಲು’, ‘ಅದೇ ಕಣ್ಣು’, ‘ಶೃತಿ ಸೇರಿದಾಗ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ದತ್ತರಾಜ್ ಕೆಲಸವನ್ನು ರಾಜ್​ಕುಮಾರ್ ಮೆಚ್ಚಿಕೊಂಡಿದ್ದರು. ಈ ಕಾರಣಕ್ಕೆ ಒಟ್ಟಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. Click