ನ್ಯೂಸ್ ನಾಟೌಟ್: ಪಂಜಾಬ್ ಹರ್ಯಾಣ ಹೈಕೋರ್ಟ್ ನಲ್ಲಿ ವಿಚಿತ್ರ ವಿಚ್ಛೇದನ ಪ್ರಕರಣವೊಂದು ಇಂದು(ಅ.22) ನಡೆದಿದೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯ ಮದುವೆ 2017ರಲ್ಲಿ ನಡೆದಿತ್ತು. ಪತ್ನಿಯ ವರ್ತನೆಗೆ ಬೇಸತ್ತ ಪತಿ, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಅರ್ಜಿಯಲ್ಲಿ ಆತ ಪತ್ನಿಯ ಮೇಲೆ ಹೊರಿಸಿರುವ ಆರೋಪಗಳು ವಿಚಿತ್ರವಾಗಿವೆ.
“ಪತ್ನಿ, ಮಧ್ಯರಾತ್ರಿಯವರೆಗೂ ಎಚ್ಚರವಿರುತ್ತಿದ್ದಳು. ಮಧ್ಯರಾತ್ರಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಅತ್ತೆಯೇ ಆಕೆಗೆ ಆಹಾರವನ್ನು ರೂಮಿಗೆ ತಂದುಕೊಡುವಂತೆ ಒತ್ತಾಯ ಮಾಡುತ್ತಿದ್ದಳು. ಪತ್ನಿಯ ಲೈಂಗಿಕ ಚಟಕ್ಕೆ ಬೇಸತ್ತಿದ್ದೇನೆ. ತನ್ನ ಪತ್ನಿಗೆ ಪೋರ್ನ್ ನೋಡುವ ಚಟವಿದೆ. ಮೊಬೈಲ್ ಗೇಮ್ಗಳನ್ನು ಆಡುವ ಆಕೆ, ಲೈಂಗಿಕ ಕ್ರಿಯೆ ನಡೆಸುವಂತೆ ನನಗೆ ಒತ್ತಡ ಹೇರ್ತಾಳೆ. ಕನಿಷ್ಠ 10 ರಿಂದ 15 ನಿಮಿಷಗಳ ಕಾಲ ಶಾರೀರಿಕ ಸಂಬಂಧ ನಡೆಸಬೇಕು. ಪ್ರತಿ ರಾತ್ರಿ ಮೂರು ಬಾರಿ ದೈಹಿಕ ಸಂಬಂಧ ಹೊಂದಲೇಬೇಕು” ಎಂದು ಪತ್ನಿ ಒತ್ತಡ ಹೇರುತ್ತಿದ್ದಾಳೆ ಎಂದು ಆತ ಆರೋಪಿಸಿದ್ದಾನೆ.
ದೈಹಿಕವಾಗಿ ಅಸ್ವಸ್ಥನಾಗಿದ್ದ ಪತಿಯನ್ನು ಪತ್ನಿ ಗೇಲಿ ಮಾಡುತ್ತಿದ್ದಳು. ಅಲ್ಲದೆ ಬೇರೊಬ್ಬನ ಜೊತೆ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಳು. ಆಕೆ ಬಯಸಿದಷ್ಟು ದೈಹಿಕ ಸುಖ ನೀಡಲು ಸಾಧ್ಯವಾಗದ ಪತಿಯನ್ನು ನಪುಂಸಕ ಎಂದು ಕರೆದಿದ್ದಳು ಎಂದು ಪತಿ ದೂರಿನಲ್ಲಿ ತಿಳಿಸಿದ್ದಾನೆ.
ವಿಚಾರಣೆ ವೇಳೆ ಪತ್ನಿ ಕೂಡ ಪತಿ ವಿರುದ್ಧ ಒಂದಿಷ್ಟು ಆರೋಪ ಮಾಡಿದ್ದಾಳೆ. ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾನೆ ಎಂದು ಪತ್ನಿ ಹೇಳಿದ್ದಾರೆ. ಅತ್ತೆ, ಅಮಲು ಮಾತ್ರೆಗಳನ್ನು ನೀಡುತ್ತಿದ್ದಳು. ಪ್ರಜ್ಞೆ ತಪ್ಪಿದಾಗ ಮಂತ್ರವಾದಿಯನ್ನು ಕರೆಸಿ ತಾಯತ ಹಾಕುತ್ತಿದ್ದರು. ಅವರು ಹೇಳಿದಂತೆ ಕೇಳ್ಬೇಕು ಎನ್ನುವ ಕಾರಣಕ್ಕೆ ಅಮಲಿನ ನೀರು ಕುಡಿಸುತ್ತಿದ್ದರು ಎಂದು ದೂರಿದ್ದಾಳೆ.
ವಿಚಾರಣೆ ನಡೆಸಿದ ಹೈಕೋರ್ಟ್, ಪತ್ನಿಯ ಮನವಿಯನ್ನು ತಿರಸ್ಕರಿಸಿ, ಕೌಟುಂಬಿಕ ನ್ಯಾಯಾಲಯ ನೀಡಿದ ವಿಚ್ಛೇದನವನ್ನು ಎತ್ತಿ ಹಿಡಿದಿದೆ. ಆರು ವರ್ಷಗಳಿಂದ ಬೇರೆ ವಾಸವಾಗಿದ್ದ ದಂಪತಿ ಮತ್ತೆ ಒಂದಾಗಲು ಸಾಧ್ಯವಿಲ್ಲ. ಇಬ್ಬರ ಮಧ್ಯೆ ಒಮ್ಮತವಿಲ್ಲ ಎಂದಿರುವ ಕೋರ್ಟ್ ವಿಚ್ಛೇದನ ನೀಡಿದೆ. ಜುಲೈ 12 ರಂದು ಕೌಟುಂಬಿಕ ನ್ಯಾಯಾಲಯ ಪತಿ ಪರವಾಗಿಯೇ ವಿಚ್ಛೇದನದ ತೀರ್ಪು ನೀಡಿತ್ತು.
Click