ನ್ಯೂಸ್ ನಾಟೌಟ್: ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಬುಧವಾರ(ಅ16) ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದರು.
ಭೇಟಿ ಬಳಿಕ ಮಾತನಾಡಿದ ಅಜರ್ ”ಭಗವಾನ್ ರಾಮನ ಈ ಭವ್ಯವಾದ ದೇವಾಲಯಕ್ಕೆ ಭೇಟಿ ನೀಡಿರುವುದು ನನಗೆ ನಿಜವಾಗಿಯೂ ಗೌರವ ತಂದಿದೆ. ಪ್ರತಿ ದಿನವೂ ಬರುವ ಯಾತ್ರಿಕರ ಸಂಖ್ಯೆ ನೋಡಿದೆ. ಇದು ಹಿಂದೂ ನಂಬಿಕೆಯ ಸ್ಥಳದ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ. ಭಾರತದ ಜನರಂತೆ ಇಸ್ರೇಲ್ ಜನರು ಪ್ರಾಚೀನ ಧರ್ಮ, ಸಂಪ್ರದಾಯ ಮತ್ತು ಪರಂಪರೆಯನ್ನು ಹೊಂದಿದ್ದಾರೆ. ನಮ್ಮ ಪರಂಪರೆಯ ಬಗ್ಗೆ ನಮಗೆ ಹೆಮ್ಮೆಯಿರುವಂತೆ, ನಿಮ್ಮ ಪರಂಪರೆಯ ಬಗ್ಗೆಯೂ ನೀವು ಹೆಮ್ಮೆಪಡುತ್ತೀರಿ” ಎಂದರು.
”ಬಹಳ ಮುಖ್ಯವಾದ ವಿಷಯವೆಂದರೆ ಭಕ್ತಿಯು ನಿಮಗೆ ಶಕ್ತಿ ಮತ್ತು ದೃಢತೆಯನ್ನು ನೀಡುತ್ತದೆ. ಆದ್ದರಿಂದ, ಇಲ್ಲಿಗೆ ಭೇಟಿ ನೀಡಲು ಮತ್ತು ಯಾತ್ರಾರ್ಥಿಗಳು ಮತ್ತು ಆರಾಧಕರ ಭಕ್ತಿಯನ್ನು ನೋಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೆ” ಎಂದರು.
Click