ನ್ಯೂಸ್ ನಾಟೌಟ್: ಹಿಂದೂ ಧರ್ಮದ ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರಗಳಿಂದ ಪ್ರೇರಿತರಾಗಿ ಮುಸ್ಲಿಂ ಯುವತಿ ಸನಾತನ ಧರ್ಮಕ್ಕೆ ಮತಾಂತರಗೊಂಡ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಕೆಲ ವಾರಗಳ ಹಿಂದೆ ಮುಸ್ಲಿಂ ಮಹಿಳೆಯೊಬ್ಬರು ತನ್ನ ಇಬ್ಬರು ಪುತ್ರರೊಂದಿಗೆ ಹಿಂದೂ ಧರ್ಮವನ್ನು ಸ್ವೀಕರಿಸಿದ ಘಟನೆಯೊಂದು ನಡೆದಿತ್ತು. ಇದೀಗ ಎಂ.ಟೆಕ್ ಪಧವೀಧರೆಯೊಬ್ಬಳು ಕೂಡಾ ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ತ್ಯಜಿಸಿ ಶಾಸ್ತ್ರೋಕ್ತವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಅಸ್ಸಾಂನ ರಂಗಿಯಾ ಮೂಲದ ರೆಜಿನಾ ಬೇಗಂ ಎಂಬ ಯುವತಿ ತನ್ನ ಬಯಕೆಯಂತೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಇಲ್ಲಿನ ನಾಗಾವ್ನ ಶ್ರೀ ಶ್ರೀ ಜಖಲಬಂಧಿ ದೇವಾಲಯದಲ್ಲಿ ಪುರೋಹಿತರ ಸಮ್ಮುಖದಲ್ಲಿ ರೆಜಿನಾ ಪೂಜಾ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಸನಾತನ ಧರ್ಮವನ್ನು ಸ್ವೀಕರಿಸಿದ್ದಾಳೆ ಎನ್ನಲಾಗಿದೆ. ಜುಗಲ್ ಚಂದ್ರ ದೇವ್ ಗೋಸ್ವಾಮಿ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯದಲ್ಲಿ ರೆಜಿನಾ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ.
ಇಂಜಿನಿಯರಿಂಗ್ ಪದವೀಧರೆಯಾಗಿರುವ ರೆಜಿನಾ ಬೇಗಂ ಸನಾತನ ಧರ್ಮಕ್ಕೆ ಮತಾಂತರಗೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದ್ದಳು. ಅದರಂತೆ ಸಪ್ಟೆಂಬರ್ 23 ರಂದು ಜುಗಲ್ ಚಂದ್ರ ದೇವ್ ಗೋಸ್ವಾಮಿ ಮಾರ್ಗದರ್ಶನದಲ್ಲಿ ಆಕೆ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾಳೆ. ಮತ್ತು ತನ್ನ ಹೆಸರನ್ನು ಅನನ್ಯ ಡಿಯೋರಿ ಎಂದು ಬದಲಿಸಿಕೊಂಡಿದ್ದಾಳೆ.
Click