ನ್ಯೂಸ್ ನಾಟೌಟ್: ದೆಹಲಿಯ ಚಾಂದಿನಿ ಚೌಕ್ ಮಾರುಕಟ್ಟೆಯಲ್ಲಿ ಭಾರತದಲ್ಲಿನ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಎಂಬವರ ಮೊಬೈಲ್ ಫೋನನ್ನು ಕಳ್ಳಲು ಎಗರಿಸಿದ್ದಾರೆ.
ದೀಪಾವಳಿಯ ಹಿನ್ನೆಲೆಯಲ್ಲಿ ಫ್ರೆಂಚ್ ರಾಯಭಾರಿ ಥಿಯೆರಿ ಮ್ಯಾಥೌ ಅವರು ಅಕ್ಟೋಬರ್ 20 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಹಳೆಯ ದೆಹಲಿಯ ಚಾಂದಿನಿ ಚೌಕ್ ನಲ್ಲಿ ಶಾಪಿಂಗ್ ಗೆ ತೆರಳಿದ್ದರು. ಈ ವೇಳೆ ಜನನಿಬಿಡ ಪ್ರದೇಶವಾಗಿರುವ ಮಾರುಕಟ್ಟೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ತಕ್ಷಣವೇ ಫೋನ್ ಕಳವಾಗಿರುವ ಕುರಿತು ಮ್ಯಾಥೌ ದೂರು ಸಲ್ಲಿಸಿದ್ದರು.
ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಅವರ ಬಳಿಯಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದಾರೆ.
ದೆಹಲಿಯ ಚಾಂದಿನಿ ಚೌಕ್ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ಪ್ರದೇಶವಾಗಿದೆ. ಈ ಪ್ರದೇಶ ಸದಾ ಜನಜಂಗುಳಿಯಿಂದ ಕೂಡಿರುತ್ತದೆ, ಹಾಗಾಗಿ ಕಳ್ಳರ ಕೈಚಳಕವೂ ಹೆಚ್ಚಾಗಿದೆ.
Click