ನ್ಯೂಸ್ ನಾಟೌಟ್ : ಮದುವೆಯಾಗೋ ಹುಡುಗ ಹಾಗಿರಬೇಕು ಹೀಗಿರಬೇಕು ಅಂತ ಕನಸು ಕಾಣೋದು ಸಹಜ.ಆದರೆ ಇಲ್ಲೊಬ್ಬಳು ಮದುವೆಯಾದ ಬಳಿಕ ತನ್ನ ಗಂಡ ಕಪ್ಪಗಿದ್ದಾನೆ ಅಂತ ಹೇಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ವರದಿಯಾಗಿದೆ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ.
4 ತಿಂಗಳ ಹಿಂದೆ ಮದುವೆ
ಮದುವೆಯಾದ ಬಳಿಕ ಪ್ರತಿ ದಿನದಂತೆ ಆಕೆಯ ಪತಿ ಕೆಲಸಕ್ಕೆ ಹೋಗಿದ್ದರು. ಆಗ ಮನೆಯಲ್ಲಿ ಒಬ್ಬಳೇ ಇದ್ದ ಆಕೆ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ತನ್ನ ಗಂಡ ಕಪ್ಪಗಿದ್ದಾನೆ ಎಂದು ಆಕೆ ಕೊರಗುತ್ತಿದ್ದಳು.ತನ್ನ ಮದುವೆಯಿಂದ ಅವಳು ಸಂತೋಷವಾಗಿರಲಿಲ್ಲ.ಆಕೆಯ ಆತ್ಮಹತ್ಯೆಯ ನಂತರ ಸುತ್ತಮುತ್ತಲಿನವರನ್ನು ವಿಚಾರಿಸಿದಾಗ ಆ ಮಹಿಳೆಗೆ ಪತಿ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ.
ಸುಂದರವಾಗಿರಬೇಕಾಗಿತ್ತು
ತನಗೆ ಇನ್ನೂ ಸುಂದರವಾದ ಗಂಡ ಬೇಕಾಗಿತ್ತು ಎಂಬ ಕೊರಗು ಆ ಮಹಿಳೆಗಿತ್ತು ಎನ್ನಲಾಗಿತ್ತು. ವೈವಾಹಿಕ ಜೀವನದಲ್ಲಿ ಆಕೆ ಖುಷಿಯಾಗಿರಲಿಲ್ಲ. ಸ್ಥಳೀಯ ಜನರ ಪ್ರಕಾರ, ಆಕೆಯ ಪತಿ ಕಪ್ಪಗಿದ್ದು, ಅವಳು ಬಿಳಿ ಬಣ್ಣದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದಳು ಎಂಬ ಅಭಿಪ್ರಾಯ ಕೇಳಿ ಬಂದಿದೆ.