ನ್ಯೂಸ್ ನಾಟೌಟ್: ರಾಜ್ಯದ ಹಲವೆಡೆ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ರಾತ್ರಿ ಸುರಿದ ಅಧಿಕ ಮಳೆಗೆ ಚಿಕ್ಕಮಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿದೆ. ಆಸ್ಪತ್ರೆ ಒಳಗೆ ಕೊಳಚೆ ನೀರು ತುಂಬಿದ್ದರಿಂದ ರೋಗಿಗಳು ರಾತ್ರಿಯಿಡೀ ಪರದಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮಳೆ ನೀರು ನುಗ್ಗಿ ರೋಗಿಗಳ ಸ್ಥಿತಿ ಚಿಂತಾಜನಕವಾಗಿತ್ತು. ಮಳೆ ಜೊತೆ ಡ್ರೈನೇಜ್ ವಾಟರ್ ಸೇರಿಕೊಂಡಿದ್ದು, ಆಸ್ಪತ್ರೆ ರೋಗ ಗುಣಪಡಿಸುವ ಬದಲು ಹರಡುವ ಸ್ಥಳವಾಗಿ ಹೋಗಿದೆ. ಆಸ್ಪತ್ರೆಯ ಗ್ರೌಂಡ್ ಫ್ಲೋರ್ಗೆ ಡ್ರೈನೇಜ್ ನೀರು ನುಗ್ಗಿದ್ದರಿಂದ ರೋಗಿಗಳು ಒಳ ಪ್ರವೇಶಿಸಲು ಆಗದೆ ಹಾಗೂ ಒಳಗಡೆ ಇದ್ದ ರೋಗಿಗಳಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ.
ಡ್ರೈನೇಜ್ ವಾಟರ್ ಜೊತೆ ನೀರು ತುಂಬಿದ್ದರಿಂದ ಕೆಟ್ಟ ವಾಸನೆ ಹರಡಿ ಆಸ್ಪತ್ರೆ ರೋಗಗ್ರಸ್ತ ಸ್ಥಳವಾಗಿದ್ದು ಇಡೀ ರಾತ್ರಿ ಕೆಟ್ಟ ವಾಸನೆ ಮಧ್ಯೆ ಮಳೆ ನೀರಲ್ಲಿ ರೋಗಿಗಳು ಕಾಲ ಕಳೆದಿದ್ದಾರೆ.
ಕಳೆದ ದಿನ ಸುರಿದ ಒಂದು ಗಂಟೆಯ ಧಾರಾಕಾರ ಮಳೆಗೆ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿದೆ. ಸರ್ಕಾರಿ ಆಸ್ಪತ್ರೆಯ ಸ್ಥಿತಿ ಕಂಡು ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ರೋಗಿಗಳು ಆಗ್ರಹಿಸಿದ್ದಾರೆ.
Click