ರಸ್ತೆ ಮಧ್ಯೆ ಹುಡುಗಿಯರ ವಿಪರೀತ ಜಗಳ..! ಪ್ಯಾಂಟ್‌ ಬಿಚ್ಚಿದ್ರೂ ನಿಲ್ಲದ ಫೈಟಿಂಗ್‌..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್‌: ಸೋಶಿಯಲ್ ಮೀಡಿಯಾದಲ್ಲಿ ಬೀದಿ ಬದಿ ಜಗಳಗಳ ಸಾಕಷ್ಟು ವಿಡಿಯೋ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಇನ್ನೊಂದು ಜಡೆ ಜಗಳ ವೈರಲ್ ಆಗಿದ್ದು, ಸಾರ್ವಜನಿಕರು ಈ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ಯಾಂಟ್ ಕಳಚಿಬಿದ್ರೂ ಕ್ಯಾರೇ ಎನ್ನದ ಹುಡುಗಿ, ಒಂದೇಟು ಹಾಕಿ ನಂತ್ರ ಪ್ಯಾಂಟ್ ಹಾಕಿಕೊಳ್ಳೋದನ್ನು ನೋಡಿ ಬಳಕೆದಾರರು ದಂಗಾಗಿದ್ದಾರೆ. ಸೋಶಿಯಲ್ ಮೀಡಿಯಾ ಎಕ್ಸ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ನಾಗಾಲ್ಯಾಂಡ್‌ ಹುಡುಗಿಯರು ಬೀದಿಯಲ್ಲಿ ಅಟ್ಟಾಡಿಸಿಕೊಂಡು ಹೊಡೆದಾಡಿದ್ದಾರೆ. ಗಲಾಟೆ ಎಷ್ಟು ಭಯಾನಕ ತಿರುವು ಪಡೀತು ಅಂದ್ರೆ ಒಬ್ಬ ಹುಡುಗಿ ಮೂರ್ಛೆ ಹೋದ ಘಟನೆ ನಡೆದಿದೆ. ಆಕೆಯನ್ನು ರಕ್ಷಿಸಲು ನಿಂತಿದ್ದವರೆಲ್ಲ ಓಡಿ ಬಂದ್ರು. ಎಲ್ಲರೂ ಒಂದೇ ರೀತಿ ಡ್ರೆಸ್ ಹಾಕಿರೋದ್ರಿಂದ ಯಾವುದೋ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇವರು ಎಂದು ಅಂದಾಜಿಸಲಾಗಿದೆ. ಹುಡುಗಿ ಮೂರ್ಛೆ ಹೋಗ್ತಿದ್ದಂತೆ ಪರಿಸ್ಥಿತಿ ಸ್ವಲ್ಪ ತಿಳಿಯಾಗುತ್ತೆ. ನೆರೆದಿದ್ದವರು ಆಕೆಯನ್ನು ಎತ್ತಿ, ರಕ್ಷಿಸುವ ಕೆಲಸ ಮಾಡಿದ್ರೆ, ಮತ್ತೊಂದಿಷ್ಟು ಮಂದಿ ಕೋಪದಲ್ಲಿ ಕುದಿಯುತ್ತಿರುವ ಹುಡುಗಿಯನ್ನು ಶಾಂತಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಯಾರ ಮಧ್ಯೆ ಜಗಳ ನಡೆದಿದೆ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. Click