ನ್ಯೂಸ್ ನಾಟೌಟ್: ತನ್ನ ಇಬ್ಬರು ಹೆಣ್ಣುಮಕ್ಕಳು ಸದ್ಗುರು ಜಗ್ಗೀ ವಾಸುದೇವ್ ಆಶ್ರಮ ಸೇರಲು ಅವರ ತಲೆ ಕೆಡಿಸಲಾಗಿದೆ ಎಂದು ತಂದೆಯ ಹೇಳಿಕೆಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕ್ರಿಯೆಗಳನ್ನು ಶುಕ್ರವಾರ ರದ್ದುಗೊಳಿಸಿದೆ.
ಕೊಯಂಬತ್ತೂರಿನ ನಿವೃತ್ತ ಪ್ರಾಧ್ಯಾಪಕರಾದ ಎಸ್.ಕಾಮರಾಜ್ ಎಂಬುವವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಡೆಸಿದೆ.
ತಮ್ಮ 42 ಮತ್ತು 39 ವರ್ಷದ ಸುಶಿಕ್ಷಿತ ಪುತ್ರಿಯರ ಮನಸ್ಸನ್ನು ತಿರುಚಿ, ಅವರು ಕೊಯಂಬತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನೆಲೆಯೂರುವಂತೆ ಮಾಡಲಾಗಿದೆ ಎಂದು ಆರೋಪಿಸಿ ಕಾಮರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಪುತ್ರಿಯರಿಗೆ ತಮ್ಮ ಕುಟುಂಬದೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲು ಇಶಾ ಫೌಂಡೇಶನ್ ಆಡಳಿತ ಮಂಡಳಿಯು ಅವಕಾಶ ನೀಡುತ್ತಿಲ್ಲ ಎಂದೂ ಅವರು ನ್ಯಾಯಾಲಯದೆದುರು ಅಳಲು ತೋಡಿಕೊಂಡಿದ್ದರು.
ಇಶಾ ಫೌಂಡೇಶನ್ ವಿರುದ್ಧ ಹಲವಾರು ಲೈಂಗಿಕ ಕಿರುಕುಳ ಹಾಗೂ ದುರ್ನಡತೆಯ ಕ್ರಿಮಿನಲ್ ಪ್ರಕರಣಗಳು ಹಾಗೂ ಆರೋಪಗಳು ಇನ್ನೂ ಬಾಕಿ ಎಂದೂ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಈ ಹಿಂದಿನ ಆದೇಶದನ್ವಯ, ಇಬ್ಬರೂ ಮಹಿಳೆಯರು ನ್ಯಾಯಾಲಯದಲ್ಲಿ ಹಾಜರಿದ್ದರು. ನಾವು ನಮ್ಮ ಸ್ವ ಇಚ್ಛೆಯಿಂದ ಇಶಾ ಫೌಂಡೇಶನ್ ನೊಂದಿಗೆ ಇದ್ದೇವೆ ಹಾಗೂ ಅಲ್ಲಿರಲು ಯಾರೂ ನಮ್ಮನ್ನು ಬಲವಂತಪಡಿಸಿಲ್ಲ ಎಂದು ಆ ಮಹಿಳೆಯರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೊತೆಗೆ ಈಶ ಫೌಂಡೇಶನ್ ನ ಉಳಿದ ಎಲ್ಲಾ ಪ್ರಕರಣಗಳನ್ನು ತನಿಖೆ ನಡೆಸಿ ವರದಿ ಸಲ್ಲಿಸಲು ಮದ್ರಾಸ್ ಹೈಕೋರ್ಟ್ ಹೇಳಿತ್ತು. ಇದನ್ನು ವಿರೋಧಿಸಿ ಸುಪ್ರಿಕೋರ್ಟ್ ಮೆಟ್ಟಿಲೇರಿದ್ದ ಜಗ್ಗಿವಾಸುದೇವ್ ಪರ ತೀರ್ಪು ಬಂದಿದ್ದು, ಸುಪ್ರಿಂ ಪ್ರಕರಣವನ್ನು ರದ್ದುಗೊಳಿಸಿದೆ.
Click