ತುಂಡು ಉಡುಗೆ ತೊಟ್ಟು, ಚಪ್ಪಲಿ ಧರಿಸಿ ನವರಾತ್ರಿಯ ದುರ್ಗಾ ಪೂಜೆಯಲ್ಲಿ ಭಾಗಿ..!ಯುವತಿಯರ ವರ್ತನೆಗೆ ತೀವ್ರ ಆಕ್ರೋಶ..!

ನ್ಯೂಸ್ ನಾಟೌಟ್: ಹಲವು ದೇವಾಲಯಗಳಲ್ಲಿ ಈಗಾಗಲೇ ವಸ್ತ್ರ ಸಂಹಿತೆ ತರಲಾಗಿದೆ. ನವರಾತ್ರಿ ಹಬ್ಬದಲ್ಲಿ ಕೊಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯಲ್ಲಿ ಮೂವರು ಮಾಡೆಲ್ ಗಳು ತುಂಡುಡುಗೆ ತೊಟ್ಟು ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರುಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. View this post on Instagram A post shared by Sannati Mitra🕊️ (@sannati__) ಕೋಲ್ಕತ್ತಾದ ಮೂವರು ಮಾಡೆಲ್‌ಗಳು ದುರ್ಗಾ ಪೂಜೆಯಲ್ಲಿ ತುಂಡುಡುಗೆ ತೊಟ್ಟು ಭಾಗವಹಿಸಿದ್ದಾರೆ. ಸ್ವತಃ ಈ ಫೋಟೋವನ್ನು ಮಾಡೆಲ್ ಸನ್ನತಿ (sannati__ ) ಮತ್ತು (selena.bb22) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮೂವರು ಯುವತಿಯರು ಅರೆಬರೆ ಬಟ್ಟೆ ತೊಟ್ಟು, ಚಪ್ಪಲಿ ಧರಿಸಿ ದೇವಿಯ ವಿಗ್ರಹದ ಮುಂದೆ ನಿಂತಿರುವ ದೃಶ್ಯವನ್ನು ಕಾಣಬಹುದು. ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಈಗ ವೈರಲ್ ಆಗುತ್ತಿದೆ. Click