ನ್ಯೂಸ್ ನಾಟೌಟ್: ದರ್ಶನ್ ರಾಜಾತಿಥ್ಯ ಪ್ರಕರಣದಲ್ಲಿ ಸಾಲು ಸಾಲಾಗಿ ಅಧಿಕಾರಿಗಳು ಸಸ್ಪೆಂಡ್ ಆದರೂ ಆ ಬಳಿಕ ಈಗ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಮೊಬೈಲ್ ಬಳಕೆ ಮತ್ತು ಅಲ್ಲಿಂದಲೇ ರೌಡಿಗಳ ಡೀಲಿಂಗ್, ಬೆದರಿಕೆ ಎಲ್ಲಾ ಮೊದಲಿನಂತೆಯೇ ಶುರುವಾಗಿದೆ ಎನ್ನಲಾಗುತ್ತಿದೆ. ಜೈಲಿನೊಳಗೆ ಮತ್ತೆ ರೌಡಿಗಳ ಮೊಬೈಲ್ ಆಕ್ಟಿವ್ ಆಗಿದೆ ಎನ್ನಲಾಗುತ್ತಿದೆ.
ಯೆಸ್.. ನಟ ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲ್ಲಿನಲ್ಲಿ ಮೊಬೈಲ್ ಹಾವಳಿ ಕಡಿವಾಣ ಬಿದ್ದಿಲ್ಲ. ಬೆಂಗಳೂರಿನ ಜೈಲ್ಲಿನಿಂದಲ್ಲೇ ಇನ್ಸ್ಟಾಗ್ರಾಮ್ ಮೂಲಕ ಬೆದರಿಕೆ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ. 2021 ರಲ್ಲಿ ರಾಜಧಾನಿಯನ್ನ ಬೆಚ್ಚಿ ಬೀಳಿಸಿದ್ದ ಜೋಸೆಫ್ ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ವಾಯ್ಸ್ ಮೇಸೆಜ್ ಮಾಡಿ ಬೆದರಿಕೆವೊಡ್ಡಿದ್ದಾರೆ. ಜೈಲ್ಲಿನಲ್ಲಿರುವ ಕೈದಿ ಸೋಮಶೇಖರ್ ಅಲಿಯಾಸ್ ಸೋಮ ಎಂಬಾತ ಆರ್ಮುಗಂ ಬೆದರಿಕೆ ವೊಡ್ಡಿದ್ದಾನೆ ಎನ್ನಲಾಗಿದೆ.
ಪ್ರಕರಣದ ಸಾಕ್ಷ್ಯ ಆಟೋ ಚಾಲಕ ಆಮುರ್ಗಂ ಗೆ ಇನ್ಸ್ಟಾಗ್ರಾಮ್ ಮೂಲಕ ಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು ಸಿಸಿಬಿಯಲ್ಲಿ ಎಫ್ಐಆರ್ ದಾಖಲಾಗಿದೆ. ಬಬ್ಲಿ ಕೊಲೆ ಪ್ರಕರಣದಲ್ಲಿ ಆರ್ಮುಗಂ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಸೆಪ್ಟೆಂಬರ್ನಲ್ಲಿ ಸೋಮ ಹೆಸರಿನ ಐಡಿಯಿಂದ ಮೂರು ವಾಯ್ಸ್ ಮೇಸೆಜ್ ಕಳುಹಿಸಿ. ‘ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ಕೊಲೆ ಕೇಸ್ನಲ್ಲಿ ಯಾರೊಬ್ಬರು ಕೋರ್ಟ್ನಲ್ಲಿ ಸಾಕ್ಷಿ ಹೇಳಬಾರದು ಎಂದು ಬೆದರಿಸಿದ್ದಾರೆ. ಬಬ್ಲಿ ಹೆಂಡತಿ, ಸುನೀಲ ಅಲಿಯಾಸ್ ಸೊಂಡಿಲಿ ಜಾರ್ಜ್, ನಾದನಿಗೂ ತಲುಪಿಸು ಎಂದು ಮೇಸೆಜ್ ಹಾಕಿದ್ದಾರೆ ಎನ್ನಲಾಗಿದೆ. ಈ ಎಲ್ಲಾ ಮೆಸೇಜ್ ಗಳೂ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲುಗಳ ಒಳಗಿಂದ ಹೋಗಿದೆ ಎನ್ನಲಾಗಿದೆ.
ನಟ ದರ್ಶನ್ ರಾಜಾಥಿತ್ಯ ಕೇಸ್ ನಲ್ಲಿ ಅಧಿಕಾರಿಗಳು ಸಸ್ಪೆಂಡ್ ಆದ್ರೂ ಮತ್ತೆ ರೌಡಿಗಳ ಮೊಬೈಲ್ ಆಕ್ಟಿವ್ ಆಗಿರೋದು ಕಳವಳಕಾರಿ ಸಂಗತಿಯಾಗಿದೆ. ಈ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Click