ತೆಂಗಿನ ಮರ ಏರಿ ಕುಳಿತ ಕಿರಿಕ್ ಪಾರ್ಟಿ ಚಿತ್ರದ ನಟಿ..! ಏನಿದು ವೈರಲ್ ಫೋಟೋ..?

ನ್ಯೂಸ್ ನಾಟೌಟ್ : ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ಸಂಯುಕ್ತಾ ಹೆಗಡೆ ಬೀಚ್‌ ನಲ್ಲಿ ಎಂಜಾಯ್ ಮಾಡಿದ್ದು ಮಾತ್ರವಲ್ಲದೆ, ಸಂಯುಕ್ತಾ ಹೆಗಡೆ ಇಲ್ಲಿಯ ತೆಂಗಿನ ಮರವನ್ನು ಏರಿ ಕುಳಿತಿದ್ದಾರೆ. ಸಂಯುಕ್ತಾ ಹೆಗಡೆ ಬೀಚ್‌ನಲ್ಲಿ ಬಿಂದಾಸ್ ಆಗಿಯೇ ಓಡಾಡಿದ್ದಾರೆ. ಜೊತೆಗೆ ಇಲ್ಲಿಯ ಪ್ರತಿ ಕ್ಷಣವೂ ಕ್ಯಾಮರಾದಲ್ಲಿ ಕ್ಯಾಪ್ಚರ್ ಕೂಡ ಆಗಿದೆ. ಆ ಲೆಕ್ಕದಲ್ಲಿ ಸಂಯುಕ್ತಾ ಹೆಗಡೆ ಇಲ್ಲಿಯ ತೆಂಗಿನ ಮರವನ್ನು ಏರಿ ಫೋಟೋಗೆ ಫೋಸ್ ಕೊಟ್ಟಿದ್ದು, ಈಗ ಎಲ್ಲೆಡೆ ವೈರಲ್ ಆಗುತ್ತಿದೆ. View this post on Instagram A post shared by Samyuktha Hegde (@samyuktha_hegde) ಮರವನ್ನ ಏರಿ ಅಲ್ಲಿಯಿಂದಲೇ ಒಂದು ಪೋಸ್ ಕೂಡ ಕೊಟ್ಟಿದ್ದಾರೆ. ಸಮುದ್ರ ತೀರದಲ್ಲಿ ಬಿಕಿನಿ ತೊಟ್ಟು ಓಡಾಡೋದು ಕಾಮನ್ ಬಿಡಿ. ಆದರೆ, ಇಲ್ಲಿಯ ಮರವೇರೋದು ಹೊಸತೇ ಆಗಿದೆ.ಸಂಯುಕ್ತಾ ಹೆಗಡೆ ಸದ್ಯಕ್ಕೆ ಯಾವುದೇ ಸಿನಿಮಾಗಳನ್ನ ಒಪ್ಪಿಕೊಂಡಿಲ್ಲ. ಆದರೆ, ಕ್ರೀಮ್ ಅನ್ನುವ ಒಂದು ಚಿತ್ರ ಮಾಡಿದ್ದರು. ಕನ್ನಡದ ಈ ಚಿತ್ರದಲ್ಲಿ ಸಂಯುಕ್ತಾ ಹೆಗಡೆ ನಟನೆ ಕೂಡ ಮಾಡಿದ್ದರು. Click