- +91 73497 60202
- [email protected]
- November 21, 2024 8:08 PM
ನ್ಯೂಸ್ ನಾಟೌಟ್: ಕೇಕ್ ತಿಂದ ಬಳಿಕ ಫುಡ್ ಪಾಯ್ಸನ್ ನಿಂದ 5 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ ಭುವನೇಶ್ವರಿನಗರದಲ್ಲಿ ನಡೆದಿದೆ. ಧೀರಜ್ ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ. ಆತನ ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲರಾಜ್ ಗೆ ಭಾನುವಾರ(ಅ.6) ಸಂಜೆ ಕೇಕ್ ಆರ್ಡರ್ ಬಂದಿತ್ತು. ಬೇಕರಿಯಿಂದ ಕೇಕ್ ತೆಗೆದುಕೊಂಡು ಹೋಗುವಷ್ಟರಲ್ಲಿ ಆರ್ಡರ್ ಕ್ಯಾನ್ಸಲ್ ಆಗಿದೆ. ಈ ಹಿನ್ನಲೆ ಬಾಲರಾಜ್ ತಮ್ಮ ಮನೆಗೆ ಆ ಕೇಕ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಬಳಿಕ ಇಡೀ ಕುಟುಂಬ ಆ ಕೇಕ್ ಅನ್ನು ಸೇವಿಸಿದ್ದರಂತೆ. ಕೇಕ್ ತಿಂದ ಬಳಿಕ ಮಗು, ಪೋಷಕರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಬಗ್ಗೆ ವಿವರ ನೀಡಬೇಕಾದ ತಂದೆ-ತಾಯಿ ಸಹ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪೊಲೀಸರಿಗೆ ದೂರು ಕೊಡಲು ಅಥವಾ ಘಟನೆ ಹೇಗೆ ನಡೆದಿದೆ ಅನ್ನೋದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಘಟನೆ ಬೆಳಕಿಗೆ ಬರುವ ಸಾಧ್ಯತೆಯಿದೆ.ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಆಂಜಿನಪ್ಪ, ‘ಇದು ಫುಡ್ ಪಾಯ್ಸನ್ನಿಂದ ಆಗಿದ್ದು, ಆಸ್ಪತ್ರೆಗೆ ಬರುವ ಮೊದಲೇ 5 ವರ್ಷದ ಮಗು ಮೃತಪಟ್ಟಿದೆ ಎಂದಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ