- +91 73497 60202
- [email protected]
- November 1, 2024 11:02 AM
ನ್ಯೂಸ್ ನಾಟೌಟ್ : ಬಿ.ಎಸ್.ಎನ್.ಎಲ್ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾಗಿದೆ. ಕೋಟ್ಯಂತರ ಬಳಕೆದಾರರು ಈ ಸಂಪರ್ಕವನ್ನು ಬಳಸುತ್ತಿರುವುದು ಗೊತ್ತಿರುವ ಸಂಗತಿ. ಈಗ BSNL ಹೊಸ 4G ಸೇವೆಗಳನ್ನು ಪರಿಚಯಿಸಿದೆ. BSNL ದೇಶದ ಜನರಿಗೆ 5G ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಹೊಸ ಲೋಗೋ ಪರಿಚಯಿಸಿದ್ದಾರೆ. ರಾಷ್ಟ್ರೀಯ ಧ್ವಜವನ್ನು ಪ್ರತಿಬಿಂಬಿಸುವ ಕೇಸರಿ ಬಣ್ಣವನ್ನು ಮುಂಚೂಣಿಯಲ್ಲಿಟ್ಟುಕೊಂಡು ತ್ರಿವರ್ಣ ಮಾದರಿಯಲ್ಲಿ ಲೋಗೋ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಕೇಂದ್ರ ಸಚಿವರು 7 ಹೊಸ ಯೋಜನೆಗಳನ್ನು ಪರಿಚಯಿಸಿದ್ದಾರೆ. ಅಲ್ಲದೇ, ಲೋಗೋದಲ್ಲಿನ ‘ಕನೆಕ್ಟಿಂಗ್ ಇಂಡಿಯಾ’ ಅನ್ನು ‘ಕನೆಕ್ಟಿಂಗ್ ಭಾರತ್’ ಎಂದು ಬದಲಾಯಿಸಲಾಗಿದೆ. ಈ ಹಿಂದೆ ಇತರ ಕಂಪನಿಗಳ ರೀಚಾರ್ಜ್ ಯೋಜನೆಗಳಲ್ಲಿ ಬೆಲೆ ಏರಿಕೆಯಿಂದಾಗಿ ಜನರು BSNL ನೆಟ್‌ವರ್ಕ್‌ಗೆ ಬದಲಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಹಲವೆಡೆ ನೆಟ್‌ವರ್ಕ್ ಸಮಸ್ಯೆ ತಲೆದೋರಿದೆ. ಕಂಪನಿಯು ಈ ಸಮಸ್ಯೆಗಳನ್ನು ನಿಭಾಯಿಸುತ್ತಿದೆ ಮತ್ತು ದೇಶದಲ್ಲಿ 5G ಸೇವೆಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿದೆ. ಬಿಎಸ್‌ಎನ್‌ಎಲ್ ಖಾಸಗಿ ಸ್ಪರ್ಧಿಗಳಿಗಿಂತ ಕಡಿಮೆ ಬೆಲೆಯ ಪ್ಲಾನ್‌ಗಳನ್ನು ನೀಡುತ್ತಿದ್ದರೂ, ನೆಟ್‌ವರ್ಕ್ ಸಮಸ್ಯೆಗಳನ್ನು ಸರಿಪಡಿಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಸಾರ್ವಜನಿಕರಿಂದ ಒತ್ತಾಯಗಳು ಕೇಳಿಬಂದಿದೆ. ಜನರಿಗೆ ಸ್ಥಿರವಾದ ಮೊಬೈಲ್ ಸೇವೆಯನ್ನು ಒದಗಿಸಲು BSNL ಸ್ಪ್ಯಾಮ್ ಕರೆಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುವ ತಂತ್ರಜ್ಞಾನವನ್ನು ಪರಿಚಯಿಸಿದೆ. ಬಳಕೆದಾರರು ಈ ಮೂಲಕ ಅನಗತ್ಯ ಕರೆಗಳನ್ನು ತಪ್ಪಿಸಬಹುದು ಎಂದು ಹೇಳಿದೆ. ಬಿಎಸ್‌ಎನ್‌ಎಲ್ ಫೈಬರ್ ಬ್ರಾಡ್‌ಬ್ಯಾಂಡ್ ಗ್ರಾಹಕರು ದೇಶದಲ್ಲಿ ಎಲ್ಲಿಗೆ ಹೋದರೂ ಬಿಎಸ್‌ಎನ್‌ಎಲ್ ಹಾಟ್‌ಸ್ಪಾಟ್ ಅನ್ನು ಉಚಿತವಾಗಿ ಪಡೆಯಬಹುದು. ಹೀಗಾಗಿ, ನೀವು ಅನಗತ್ಯವಾಗಿ ಮೊಬೈಲ್ ಡೇಟಾವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಫೈಬರ್ ಬ್ರಾಡ್‌ಬ್ಯಾಂಡ್ ಮಾಲೀಕರು ಅತಿ ಕಡಿಮೆ ದರದ 500 ಟಿವಿ ಚಾನೆಲ್‌ಗಳನ್ನು ಲೈವ್ ಆಗಿ ವೀಕ್ಷಿಸಬಹುದು ಎಂದು ಹೇಳಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ