ಕನ್ನಡ ಬಿಗ್‌ ಬಾಸ್‌ ಕಾರ್ಯಕ್ರಮದ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು..! ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ಜಾರಿ ಮಾಡಿದ ಪೊಲೀಸರು..!

ನ್ಯೂಸ್ ನಾಟೌಟ್: ಕಿಚ್ಚ ಸುದೀಪ್‌ ನೇತೃತ್ವದಲ್ಲಿ ನಡೆಸಿಕೊಡುವ ಬಿಗ್‌ಬಾಸ್‌ ಕನ್ನಡ -11 ಕಾರ್ಯಕ್ರಮ ಆರಂಭವಾಗಿ ಎರಡು ವಾರದಲ್ಲೇ ಪೊಲೀಸರು ಆಯೋಜಕರಿಗೆ ನೋಟಿಸ್ ನೀಡಿ, ಕ್ರಮಕ್ಕೆ ಮುಂದಾಗಿದ್ದಾರೆ. ಈ ಬಾರಿಯ ಬಿಗ್‌ ಬಾಸ್‌ (BBK) ಕಾರ್ಯಕ್ರಮ ಸ್ವರ್ಗ- ನರಕದ ಕಾನ್ಸೆಪ್ಟ್‌ ನೊಂದಿಗೆ ಆರಂಭವಾಗಿತ್ತು. ಆರಂಭದಿಂದಲೇ ಕೆಲ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಹಾಗೂ ನರಕಕ್ಕೆ ಕಳುಹಿಸಲಾಗಿತ್ತು. ನರಕದ ಮನೆಯಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಗಂಜಿ ಊಟವನ್ನು ಮಾತ್ರ ನೀಡಲಾಗುತ್ತಿತ್ತು. ಕುಡಿಯುವ ನೀರನ್ನು ಮಡಿಕೆಯಲ್ಲಿ ಇಡಲಾಗಿತ್ತು. ಇದಲ್ಲದೆ ವಾಶ್‌ ರೂಮ್‌ ಹೋಗುವುದಕ್ಕೂ ಸ್ವರ್ಗ ನಿವಾಸಿಗಳ ಬಳಿ ಅನುಮತಿ ಕೇಳಬೇಕಿತ್ತು ಇದೆಲ್ಲ ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದು ಬಿಗ್​ಬಾಸ್ ಮನೆಯಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿದೆ ಎಂದು ದೂರು ನೀಡಿದ್ದಾರೆ. ಕೆಲ ಸ್ಪರ್ಧಿಗಳು ಪರಸ್ಪರ ಜಗಳವಾಡುವ ಭರದಲ್ಲಿ ಮಹಿಳಾ ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಈ ಕಾರಣದಿಂದ ಮಹಿಳಾ ಆಯೋಗದ ಅಧ್ಯಕ್ಷೆ ಪೊಲೀಸರಿಗೂ ಪತ್ರ ಬರೆದಿದ್ದರು. ಇದೀಗ ಮಹಿಳಾ ಆಯೋಗ ನೀಡಿದ ದೂರಿನ ಮೇರೆಗೆ ಕುಂಬಳಗೋಡು ಠಾಣೆ ಪೊಲೀಸರು ಬಿಗ್‌ ಬಾಸ್‌ ಆಯೋಜಕರಿಗೆ ನೊಟೀಸ್‌ ನೀಡಿದ್ದಾರೆ.ಬಿಗ್‌ಬಾಸ್’ ಸೆಟ್‌ಗೆ ತೆರಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. Click