- +91 73497 60202
- [email protected]
- November 22, 2024 1:31 AM
ನ್ಯೂಸ್ ನಾಟೌಟ್: ಬೆಂಗಳೂರು ನಗರದಲ್ಲಿ ಬಿಯರ್ ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಶೇ13.03 ರಷ್ಟು ಹೆಚ್ಚು ಬಿಯರ್ ಮಾರಾಟವಾಗಿದೆ. ಕೊರೊನಾ ಸಮಯದಲ್ಲಿ ಬಿಯರ್ ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. 2020-21 ಕೊರೊನಾ ಸಂದರ್ಭದಲ್ಲಿ ಬಿಯರ್ ಮಾರಾಟ ಶೇ 32.13 ರಷ್ಟು ಕುಸಿದಿತ್ತು. ಆ ವರ್ಷ, ನಗರದಲ್ಲಿ ಕೇವಲ 6.05 ಕೋಟಿ ಲೀಟರ್ ಬಿಯರ್ ಮಾರಾಟವಾಗಿತ್ತು. 2021-22ರಲ್ಲಿ ಕೊರೊನಾ ಅಲೆ ಅಲ್ಪ ಮಟ್ಟಿಗೆ ಕಡಿಮೆಯಾಗಿದ್ದರಿಂದ ಪಬ್ ಮತ್ತು ಬಾರ್ಗಳ ಬಾಗಿಲು ತೆರೆದುಕೊಂಡವು. ಆ ವರ್ಷ, 6.79 ಕೋಟಿ ಲೀಟರ್ ಮಾತ್ರ ಬಿಯರ್ ಮಾರಾಟವಾಯ್ತು. ಆದರೆ, 2022-23ರಲ್ಲಿ ಚಿತ್ರಣ ಬದಲಾಯ್ತು. ಆ ವರ್ಷ, ನಗರದಲ್ಲಿ 10.17 ಕೋಟಿ ಲೀಟರ್ ಬಿಯರ್ ಮಾರಾಟವಾಯ್ತು. 2020 ಮತ್ತು 21ಕ್ಕಿಂತ 2022-23ನೇ ಸಾಲಿನಲ್ಲಿ ಶೇ49 ರಷ್ಟು ಬಿಯರ್ ಮಾರಾಟದಲ್ಲಿ ಏರಿಕೆಯಾಯಿತು. ಬ್ರೂವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಮಹಾನಿರ್ದೇಶಕ ಮಾತನಾಡಿ, ಬೆಂಗಳೂರಿನಲ್ಲಿ ಪಬ್ ಸಂಸ್ಕೃತಿ ಹೆಚ್ಚಾಗಿದೆ. ಬಿಯರ್ ಅನ್ನು ಹೆಚ್ಚಾಗಿ ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಸೇವಿಸಲಾಗುತ್ತದೆ. ಆದರೆ ಹಾರ್ಡ್ ಮದ್ಯವನ್ನು ಜನರು ಮನೆಯಲ್ಲಿ ಸೇವಿಸಲು ಇಷ್ಟಪಡುತ್ತಾರೆ ಎಂದು ಹೇಳಿದರು. ಕೋಲ್ಡ್ ಡ್ರಿಂಗ್ಸ್ ಗಿಂತ ಬಿಯರ್ ಮಾರಾಟವೇ ಹೆಚ್ಚಾಗಿದೆ ಎನ್ನಲಾಗುತ್ತಿದೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ