ನ್ಯೂಸ್ ನಾಟೌಟ್: ಹಿರಿಯರು ನಮ್ಗೆಲ್ಲಾ ಊಟವಾದ ಬಳಿಕ ಸ್ನಾನ ಮಾಡಬಾರದು ಎಂದು ಹೇಳಿರುವುದನ್ನು ಕೇಳಿದ್ದೇವೆ. ಕೆಲವರು ಊಟ ಮಾಡಿದ ನಂತರ ಸ್ನಾನ ಮಾಡೋ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಹೆಚ್ಚಿನವರು ಮಲಗುವ ಮುನ್ನ, ಊಟ ಮಾಡಿದ ನಂತರ ಸ್ನಾನ ಮಾಡುತ್ತಾರೆ. ಈ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ಆರೋಗ್ಯ ತಜ್ಞರ ಅಭಿಪ್ರಾಯ. ಊಟದ ನಂತರ ಸ್ನಾನ ಮಾಡುವುದರಿಂದ ಏನೆಲ್ಲ ತೊಂದರೆಗಳಿವೆ ಅನ್ನೋ ವಿವರ ಇಲ್ಲಿದೆ.
ಜೀರ್ಣಕಾರಿ ಸಮಸ್ಯೆ:
ತಿಂದ ನಂತರ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆ ಆಗುತ್ತದೆ. ಜೀರ್ಣಕ್ರಿಯ ಪ್ರಕ್ರಿಯೆಯನ್ನು ಸ್ನಾನ ನಿಧಾನಗೊಳಿಸುತ್ತದೆ. ಇದರಿಂದ ಗ್ಯಾಸ್, ಅಜೀರ್ಣ, ಹೊಟ್ಟೆ ಉಬ್ಬುವುದು, ಹೊಟ್ಟೆಯ ಅಸ್ವಸ್ಥತೆ ಮತ್ತು ಮಲಬದ್ಧತೆಯಂತಹ ಸಮಸ್ಯೆ ಉಂಟಾಗುತ್ತದೆ.
ನರಮಂಡಲ ನಿಧಾನ
ತಿಂದ ನಂತರ ಸ್ನಾನ ಮಾಡುವುದರಿಂದ ನರಮಂಡಲದ ಮೇಲೆ ಒತ್ತಡ ಬೀಳಬಹುದು, ಊಟದ ನಂತರ, ನರಮಂಡಲವು ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಸುತ್ತದೆ.ಇದು ರಕ್ತ ಪರಿಚಲನೆಯನ್ನು ವೇಗಗೊಳಿಸುತ್ತದೆ. ಆಹಾರವನ್ನು ತ್ವರಿತವಾಗಿ ಜೀರ್ಣಿಸುತ್ತದೆ. ಸ್ನಾನ ಮಾಡುವುದರಿಂದ ಇಡೀ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ.
ನಿಧಾನ ರಕ್ತ ಪರಿಚಲನೆ
ಸ್ನಾನ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ದೇಹವನ್ನು ತಂಪಾಗಿಸಲು ರಕ್ತನಾಳಗಳಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಚರ್ಮದ ಮೂಲಕ ಶಾಖವನ್ನು ಹೊರಹಾಕಲು ಕಾರಣವಾಗುತ್ತದೆ. ಆದರೆ ಈಗಾಗಲೇ ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ರಕ್ತ ಪರಿಚಲನೆ ವೇಗವಾಗಿ ನಡೆಯುತ್ತಿರುವಾಗ, ಅದು ನಿರ್ಬಂಧಿಸಲ್ಪಡುತ್ತದೆ.