ನ್ಯೂಸ್ ನಾಟೌಟ್: ತಂದೆ ತಾಯಿ ಮನೆಯಲ್ಲಿ ಜಗಳವಾಡುತ್ತಿದ್ದ ಹಿನ್ನೆಲೆಯಲ್ಲಿ ಭಯ ಮತ್ತು ಕಿರಿಕಿರಿಗೊಂಡ ಏಳು ವರ್ಷ ಬಾಲಕಿ ಮನೆಯಿಂದ ಹೊರಗೆ ಬಂದು ದೂರಕ್ಕೆ ಹೋಗಿದ್ದಾಳೆ. ಈ ವೇಳೆ ಚಿರತೆಯೊಂದು ದಾಳಿ ಮಾಡಿ ಆಕೆಯನ್ನು ಕೊಂದಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ಶುಕ್ರವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಚಿರತೆ ದಾಳಿಗೆ ಏಳು ವರ್ಷದ ಮಗು ಸಾವನ್ನಪ್ಪಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಮಗುವಿನ ಪಾಲಕರು ಪರಸ್ಪರ ಜಗಳವಾಡುತ್ತಿದ್ದರು. ಈ ವೇಳೆ ಮಗು ಮನೆಯಿಂದ ಹೊರ ಹೋಗಿದೆ. ಬೇಸರದಿಂದ ಸೀದಾ ಕಬ್ಬಿನ ಗದ್ದೆಯ ಕಡೆಗೆ ಹೋದಾಗ, ಅಲ್ಲಿಯೇ ಅವಿತು ಕುಳಿತಿದ್ದ ಚಿರತೆ ದಾಳಿ ಮಾಡಿ ಮಗುವನ್ನು ಸಾಯಿಸಿದೆ.
ಈ ಘಟನೆ ಪುಣೆಯ ಶಿರೂರು ತಾಲೂಕಿನಲ್ಲಿ ನಡೆದಿದ್ದು, ಚಿರತೆ ದಾಳಿಗೆ ಏಳು ವರ್ಷದ ಮಗು ಸಾವನ್ನಪ್ಪಿದೆ. ಒಬ್ಬೊಬ್ಬರಾಗಿ ಮನೆಯಿಂದ ಹೊರ ಬರಲು ಜನರು ಭಯಪಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಯೊಬ್ಬರು ಮಾಂಡವಾಗನ್ ಫರ್ತಾ ಗ್ರಾಮದಲ್ಲಿ ಶುಕ್ರವಾರ ವಂಶ್ ರಾಜ್ಕುಮಾರ್ ಸಿಂಗ್ ಎಂಬ ಹುಡುಗಿ ಕಬ್ಬಿನ ಗದ್ದೆಯತ್ತ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ.
Click