- +91 73497 60202
- [email protected]
- November 23, 2024 3:39 PM
ನ್ಯೂಸ್ ನಾಟೌಟ್: ಮದುವೆಯಾಗಿ 12 ವರ್ಷಗಳ ಬಳಿಕ ಮಗು ಜನಿಸಿದೆ. ಆಸೆ ಈಡೇರಿದ್ದು, ಮೊದಲೇ ಬೇಡಿಕೊಂಡಂತೆ ದೇವಸ್ಥಾನವೊಂದಕ್ಕೆ ದಂಪತಿ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ್ದಾರೆ. ಮಗುವನ್ನು ಟ್ರಾಲಿ ಬ್ಯಾಗ್ ಗೆ ಹಾಕಿ ಎಳೆದುಕೊಂಡು 118 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ, ಬಿಲ್ವಾರಾ-ಕೋಟಾ ಹೆದ್ದಾರಿಯಲ್ಲಿ ಟ್ರಾಲಿ ಬ್ಯಾಗ್ನಲ್ಲಿ ಮಗುವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ.ಮಾಹಿತಿ ಪ್ರಕಾರ ಜಿಲ್ಲೆಯ ಬಾಗೂರು ಬಳಿ ವಾಸವಿದ್ದ ದಂಪತಿ ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಮಗುವಾಗಿರಲಿಲ್ಲ. ಜೋಗನಿಯ ಮಾತೆಗೆ ಹರಕೆ ಕಟ್ಟಿಕೊಂಡಿದ್ದರು. ಬಳಿಕ ಮಗು ಜನಿಸಿದೆ ಮತ್ತು ಅವರ ಆಸೆ ಈಡೇರಿದ ನಂತರ, ಅವರು ತಾಯಿಯ ಆಶೀರ್ವಾದ ಪಡೆಯಲು ನವರಾತ್ರಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಲು ನಿರ್ಧರಿಸಿದ್ದಾರೆ. ಮಗು ತುಂಬಾ ಚಿಕ್ಕದಾಗಿದೆ, ಅವನು ತನ್ನ ತಾಯಿ ಇಲ್ಲದೆ ಇರುವುದಿಲ್ಲ ಹಾಗಾಗಿ ಮಗುವನ್ನು ಕರೆದುಕೊಂಡು ಹೋಗಲು ಪ್ಲ್ಯಾನ್ ಮಾಡಿ ಟ್ರಾಲಿ ಬ್ಯಾಗ್ನಲ್ಲಿ ಇರಿಸಿ ಕರೆದೊಯ್ದಿದ್ದಾರೆ. ಜೋಗನಿಯಾ ಮಾತಾ ಬಾಗೋರ್‌ನಿಂದ 118 ಕಿಲೋಮೀಟರ್ ದೂರದಲ್ಲಿದೆ. ಶನಿವಾರ ಸಂಜೆ ದಂಪತಿಗಳು ಬಾಗೋರಿನಿಂದ ಹೊರಟರು. ಭಾನುವಾರ ಬೆಳಗ್ಗೆ ಭಿಲ್ವಾರಾ ತಲುಪಿದ್ದಾರೆ. ಸೋಮವಾರ ಸಂಜೆ ಜೋಗನಿಯಾ ಮಾತೆಯ ದೇಗುಲ ತಲುಪಿದ್ದಾರೆ. ಪಾದಯಾತ್ರೆ ವೇಳೆ ಚಪ್ಪಲಿ, ಶೂ ಧರಿಸಿರಲಿಲ್ಲ. ಅವರು ಬರಿಗಾಲಿನಲ್ಲಿ ಮಾತೆಯ ಆಸ್ಥಾನಕ್ಕೆ ಹೋಗಿದ್ದಾರೆ ಎಂದು ವರದಿ ತಿಳಿಸಿದೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ