ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆ 22.ರಂದು ಹಿಮಾಲಯ ವೆಲ್ನೆಸ್ ಕಂಪೆನಿಯ ಸಹಯೋಗದೊಂದಿಗೆ ಆಯುರ್ವೇದ ಹಾಸ್ಪಿಟಲ್ ಪ್ರೋಗ್ರಾಮ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ವೈದ್ಯರುಗಳಿಗೆ ಉಪಯುಕ್ತವಾದ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ ಹಿಮಾಲಯ ವೆಲ್ನೆಸ್ ಕಂಪೆನಿಯ ವೈದ್ಯಕೀಯ ಪ್ರತಿನಿಧಿ ಅಲೋಕ್ ಕುಮಾರ್ ಪಾಲ್ಗೊಂಡಿದ್ದರು. ಅವರು ಹಿಮಾಲಯ ಫಾರ್ಮಸ್ಯುಟಿಕಲ್ಸ್ ನ ಔಷಧಿಗಳ ಕುರಿತು ಪರಿಚಯ ನೀಡಿದರು. ಅದರ ಉಪಯೋಗಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ | ಲೀಲಾಧರ್ ಡಿ ವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ | ಹರ್ಷಿತಾ ಎಂ ಹಾಗೂ ಕಾಲೇಜಿನ ವೈದ್ಯರುಗಳು ಉಪಸ್ಥಿತರಿದ್ದರು.