ನ್ಯೂಸ್ ನಾಟೌಟ್: ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 29 ರಂದು ಅರಂಬೂರು ಮದ್ರಸಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಾರ್ಷಿಕ ವರದಿ, ಆಯವ್ಯಯ ಮಂಡನೆ , ನೂತನ ಸದಸ್ಯರ ನೇಮಕ ಹಾಗೂ 2024-25 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ ಕಬೀರ್ ಲಿಮ್ರಾ, ಅಧ್ಯಕ್ಷರಾಗಿ ಅಬ್ದುಲ್ ಕುಂಞ, ಉಪಾಧ್ಯಕ್ಷರಾಗಿ ಸಫ್ವಾನ್ ಮಾಂಬ್ಲಿ, ಪ್ರದಾನ ಕಾರ್ಯದರ್ಶಿಯಾಗಿ ಆಸಿಫ್ ಪನ್ನೆ, ಜೊತೆ ಕಾರ್ಯದರ್ಶಿಗಳಾಗಿ ಮುನೀರ್ ಶೈನ್ ಹಾಗೂ ಬದ್ರುದ್ದೀನ್ ಮಾಂಬ್ಲಿ, ಕೋಶಾಧಿಕಾರಿಯಾಗಿ ನಾಸಿರ್ ಪಾಲಡ್ಕ, ಜೊತೆ ಕೋಶಾಧಿಕಾರಿಗಳಾಗಿ ಅಶ್ಫಾಕ್ ಪಾಲಡ್ಕ ಹಾಗೂ ಮಹಮ್ಮದ್ ಮಾಂಬ್ಲಿ, ಚಯರ್ ಹಾಗೂ ಟೇಬಲ್ ಉಸ್ತುವಾರಿಯಾಗಿ ಜಾವಿದ್ ಶೇಖ್, ಅಭಿನಂದನಾ ಸಮಿತಿ ಕಾರ್ಯದರ್ಶಿಯಾಗಿ ನದೀಮ್ ಶೇಖ್, ಮಾದ್ಯಮ ಸಮಿತಿ ಕಾರ್ಯದರ್ಶಿಯಾಗಿ ನಿಸಾರ್ ಶೈನ್, ಅಕಾಡೆಮಿಕ್ ವಿಂಗ್ ಕಾರ್ಯದರ್ಶಿಯಾಗಿ ಸಂಶುದ್ದೀನ್ ಮಾಂಬ್ಲಿ ಹಾಗೂ ಮೆಡಿಕಲ್ ವಿಂಗ್ ಕಾರ್ಯದರ್ಶಿಯಾಗಿ ರಮೀಜ್ ಶೈನ್ ರವರನ್ನು ನೇಮಕ ಮಾಡಲಾಯಿತು. ಸಮಿತಿಯ ನಿರ್ದೇಶಕರಾಗಿ ಬಹು| ಮುಈನುದ್ದೀನ್ ಫೈಝಿ, ಕಲಂದರ್ ಅರಂಬೂರು,ಮೂಸಾ ಹಾರಿಸ್ ಮಖ್ದೂಮಿ, ಬಷೀರ್ ಅರಂಬೂರು,ಸಿನಾನ್ ಪನ್ನೆ ಹಾಗೂ ಆಶಿಕ್ ಅರಂಬೂರುರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಬಹು| ಮುಈನುದ್ದೀನ್ ಫೈಝಿ ಉಸ್ತಾದರು ದುವಾಶೀರ್ವಚನಗೈದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಕುಂಞ ವಹಿಸಿದ್ದರು. ಆಸಿಫ್ ಪನ್ನೆ ವರದಿ ವಾಚಿಸಿ, ನಿಸಾರ್ ಶೈನ್ ನಿರೂಪಿಸಿದರು.