ನ್ಯೂಸ್ ನಾಟೌಟ್: ಟರ್ಕಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಟರ್ಕಿಷ್ ಏರ್ ಲೈನ್ಸ್ನ ಪೈಲಟ್ ವಿಮಾನ ಹಾರಾಟ ಮಾಡುತ್ತಿರುವಾಗಲೇ ಸಾವನ್ನಪ್ಪಿದ್ದಾರೆ. ಕೋ-ಪೈಲಟ್ ಸಹಾಯದಿಂದ ವಿಮಾನವು ನ್ಯೂಯಾರ್ಕ್ನಲ್ಲಿ ಬುಧವಾರ(ಅ.9) ತುರ್ತು ಭೂಸ್ಪರ್ಶ ಮಾಡಿದೆ.
ಈ ಕುರಿತಂತೆ ವಿಮಾನಯಾನ ಸಂಸ್ಥೆಯ ವಕ್ತಾರ ಯಾಹ್ಯಾ ಉಸ್ತುನ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಏರ್ಬಸ್ 350 (TK204) ವಿಮಾನವು ಅಮೆರಿಕದ ಪಶ್ಚಿಮ ಕರಾವಳಿ ಪ್ರದೇಶವಾದ ಸೀಟಲ್ನಿಂದ ಇಸ್ತಾನ್ ಬುಲ್ ಕಡೆಗೆ ಮಂಗಳವಾರ ಸಂಜೆ ಪ್ರಯಾಣ ಆರಂಭಿಸಿತು. ಕ್ಯಾಪ್ಟನ್ ಇಲ್ಸೆನ್ ಪೆಲಿವೆನ್ (59) ಮಾರ್ಗದ ನಡುವೆಯೇ ಅಸ್ವಸ್ಥಗೊಂಡರು. ಅವರಿಗೆ ಪ್ರಥಮ ಚಿಕಿತ್ಸೆ ನೀಡುವ ಪ್ರಯತ್ನವೂ ವಿಫಲವಾಯಿತು. ಹೀಗಾಗಿ ತುರ್ತು ಭೂಸ್ಪರ್ಶ ಮಾಡಲು ಸಹ ಪೈಲಟ್ ನಿರ್ಧರಿಸಿದರು. ವಿಮಾನ ಕೆಳಕ್ಕಿಳಿಯುವ ಹೊತ್ತಿಗಾಗಲೇ ಮುಖ್ಯ ಪೈಲಟ್ ಮೃತಪಟ್ಟಿದ್ದರು’ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.