- +91 73497 60202
- [email protected]
- November 22, 2024 11:21 AM
14 ಹಿಂದೂ ದೇವಾಲಯಗಳಲ್ಲಿದ್ದ ಸಾಯಿಬಾಬ ಮೂರ್ತಿಗಳ ತೆರವು..! ಸಾಯಿಬಾಬಾ ಮುಸ್ಲಿಂ ವ್ಯಕ್ತಿ ಎಂದು ವಿವಾದ..!
ನ್ಯೂಸ್ ನಾಟೌಟ್ : ಹಿಂದೂ ದೇವಾಲಯಗಳಲ್ಲಿ ಸಾಯಿ ಬಾಬಾ ಮೂರ್ತಿಗಳ ಪ್ರತಿಷ್ಠಾಪನೆ ವಿಚಾರದಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಾದ ಭುಗಿಲೆದ್ದಿದೆ. ಪ್ರಸಿದ್ಧ ಬಡಾ ಗಣೇಶ ದೇವಸ್ಥಾನ ಸೇರಿದಂತೆ ಈವರೆಗೂ 14ಕ್ಕೂ ಹೆಚ್ಚು ದೇವಾಲಯಗಳಿಂದ ಸಾಯಿಬಾಬಾ ಮೂರ್ತಿಯನ್ನು ತೆರವುಗೊಳಿಸಲಾಗಿದೆ. ಸನಾತನ ರಕ್ಷಕ ದಳದ ನೇತೃತ್ವದಲ್ಲಿ ಈ ತೆರವು ಕಾರ್ಯ ನಡೆದಿದೆ ಎಂದು ವರದಿ ತಿಳಿಸಿದೆ. ಸಾಯಿಬಾಬಾ ಮುಸ್ಲಿಂ ವ್ಯಕ್ತಿಯಾಗಿದ್ದು, ಅವರಿಗೂ ಸನಾತನ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಹಿಂದೂ ಸಂಘಟನೆಗಳಿಂದ ಇನ್ನೂ 28 ದೇವಾಲಯಗಳಲ್ಲಿ ಸಾಯಿ ಬಾಬಾ ವಿಗ್ರಹ ತೆರವಿನ ಗುರಿ ಹೊಂದಲಾಗಿದೆ ಎಂದು ತಿಳಿಸಿವೆ. ನಾವು ಸಾಯಿಬಾಬಾ ಅವರ ವಿರೋಧಿಗಳಲ್ಲ.ಆದರೆ ಅವರ ಮೂರ್ತಿಗಳನ್ನು ದೇವಾಲಯಗಳಲ್ಲಿ ಸ್ಥಾಪಿಸಲು ಬಿಡುವುದಿಲ್ಲ ಎಂದು ಸನಾತನ ರಕ್ಷಕ ದಳದ ಅಧ್ಯಕ್ಷ ಅಜಯ್ ಶರ್ಮಾ ಹೇಳಿದ್ದಾರೆ. ಸಾಯಿಬಾಬಾ ಅನುಯಾಯಿಗಳು ಅವರಿಗಾಗಿಯೇ ಗುಡಿ ನಿರ್ಮಿಸಿ, ಅಲ್ಲಿಯೇ ಪೂಜಿಸಲಿ. ಸನಾತನ ಧರ್ಮದಲ್ಲಿ ಅವರ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ. ಸನಾತನ ಧರ್ಮದ ದೇಗುಲಗಳಲ್ಲಿ ಐದು ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಪೂಜೆಗಷ್ಟೇ ಅವಕಾಶವಿದೆ. ಇದರಲ್ಲಿ ಸೂರ್ಯ, ವಿಷ್ಣು, ಶಿವ, ಶಕ್ತಿ ಹಾಗೂ ಗಣೇಶ ಮೂರ್ತಿಗಳ ಆರಾಧನೆಗಷ್ಟೇ ಅವಕಾಶ ಎಂದಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ