- +91 73497 60202
- [email protected]
- November 22, 2024 6:46 PM
ಕ್ರಿಮಿನಲ್‍ಗಳ ಮಾಹಿತಿ ನೀಡಲು ನಿರಾಕರರಿಸಿದ ವಾಟ್ಸಾಪ್..! ನಿರ್ದೇಶಕರ ವಿರುದ್ಧ ಎಫ್.ಐ.ಆರ್ ..!
ನ್ಯೂಸ್ ನಾಟೌಟ್: ಪ್ರಕರಣ ಒಂದರ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡಲು ನಿರಾಕರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ನ (WhatsApp) ನಿರ್ದೇಶಕ ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಗುರುಗ್ರಾಮ್ (Gurugram) ಪೊಲೀಸರು (Police) ಎಫ್‍ಐಆರ್ ದಾಖಲಿಸಿದ್ದಾರೆ. ಮಾಹಿತಿ ನೀಡಲು ನಿರಾಕರಿಸಿದ ವಾಟ್ಸಾಪ್‍ನ ನಿರ್ದೇಶಕರು ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರಿ ಆದೇಶಕ್ಕೆ ಅವಿಧೇಯತೆ ತೋರುವುದು, ಅಪರಾಧಿಯನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸಲು ಯತ್ನ ಮತ್ತು ಸಾಕ್ಷ್ಯವಾಗಿ ಸಲ್ಲಿಸಬೇಕಾದ ಯಾವುದೇ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ನಾಶಪಡಿಸುವ ಹುನ್ನಾರದ ಆರೋಪ ಮಾಡಲಾಗಿದೆ. ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿಯಲ್ಲಿ ದೂರೊಂದು ದಾಖಲಾಗಿತ್ತು. ಅದರ ತನಿಖೆಯ ಭಾಗವಾಗಿ, ಗುರುಗ್ರಾಮ್ ಪೊಲೀಸರು, ಆರೋಪಿಗಳು ಬಳಸುತ್ತಿದ್ದ ನಾಲ್ಕು ಸಂಖ್ಯೆಗಳ ಬಗ್ಗೆ ಮಾಹಿತಿಗಾಗಿ ವಾಟ್ಸಾಪ್ ನಿರ್ದೇಶಕರ ಬಳಿ ಮಾಹಿತಿ ಕೇಳಿದ್ದರು. ಈ ಸಂಬಂಧ ಇಮೇಲ್ ಮೂಲಕ ನೋಟಿಸ್ ಸಹ ಕಳುಹಿಸಲಾಗಿತ್ತು. ಪೊಲೀಸರು ಕೇಳಿದ್ದ ಮಾಹಿತಿಯನ್ನು ನೀಡಲು ವಾಟ್ಸಾಪ್ ತಿರಸ್ಕರಿಸಿದೆ. ಈ ನಿರಾಕರಣೆಯು ಕಾನೂನನ್ನು ನಿರ್ಲಕ್ಷಿಸುವ ಉದ್ದೇಶವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅದರಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. Click
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ